ಮುಂಬೈ: ಸಿದ್ಧಾಂತಕ್ಕೆ “ದ್ರೋಹ” ಮಾಡುವವರು ನನ್ನ ಫೋಟೋವನ್ನು ಬಳಸಬಾರದು ಎಂದು ಎನ್ ಸಿಪಿ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಿದ್ದು, ಜಯಂತ್ ಪಾಟೀಲ್ ರಾಜ್ಯಾಧ್ಯಕ್ಷರಾಗಿದ್ದಾರೆ. ಅವರು ಮಾತ್ರ ನನ್ನ ಫೋಟೋ ಬಳಸಬಹುದು ಎಂದರು. ತಮ್ಮ ಜೀವಿತಾವಧಿಯಲ್ಲಿ ಯಾರು ಫೋಟೋ ಬಳಸಬೇಕು ಎಂಬುದನ್ನು ನಿರ್ಧರಿಸುವುದು ತನ್ನ ವಿಶೇಷಾಧಿಕಾರವಾಗಿದೆ. “ನನ್ನ ಸಿದ್ಧಾಂತಕ್ಕೆ ದ್ರೋಹ ಮಾಡಿದವರು ಮತ್ತು ನನ್ನೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವವರು .ಯಾವುದೇ ಕಾರಣಕ್ಕೂ ತನ್ನ ಫೋಟೋ ಬಳಸುವಂತಿಲ್ಲ ಎಂದು ಅವರು ಹೇಳಿದರು.