ಮುಸ್ಲಿಮರಿಗೆ ಜನಸಂಖ್ಯೆ ಆಧಾರದಲ್ಲಿ ಪ್ರಾತಿನಿಧ್ಯ ದೊರಕುತ್ತಿಲ್ಲ: ಶರದ್ ಪವಾರ್

Prasthutha|

ನಾಗ್ಪುರ: ದೇಶದ ಜನಸಂಖ್ಯೆಯ ಪ್ರಮಾಣದಲ್ಲಿ ಮುಸ್ಲಿಮರು ಹೆಚ್ಚಿನ ಭಾಗವಾಗಿದ್ದರೂ ಆ ಸಮುದಾಯಕ್ಕೆ ದಕ್ಕಬೇಕಾದ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮುಖಂಡ (ಎನ್ ಸಿ ಪಿ) ಶರದ್ ಪವಾರ್ ಹೇಳಿದ್ದಾರೆ.

- Advertisement -

‘ಭಾರತೀಯ ಮುಸಲ್ಮಾನರು ಎದುರಿಸುತ್ತಿರುವ ಸಮಸ್ಯೆಗಳು’ ಎಂಬ ಶೀರ್ಷಿಕೆಯಡಿಯಲ್ಲಿಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಉದ್ದೇಶಿಸಿ ಮಾತನಾಡಿದ ಅವರು ʼಎನ್ಸಿಪಿಯು ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯವನ್ನು ನೀಡಲು ಸಾಕಷ್ಟು ರೀತಿಯಲ್ಲಿ ಶ್ರಮಿಸುತ್ತಿದೆʼ ಎಂದು ಹೇಳಿದ್ದಾರೆ.

“ಮುಸ್ಲಿಂ ಸಮುದಾಯದವರು ದೇಶದ ಇಷ್ಟು ದೊಡ್ಡ ಭಾಗವಾಗಿದ್ದರೂ ತಮಗೆ ಸಿಗುವ ಪಾಲಿನಿಂದ ಅವರು ವಂಚಿತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. “ನಾವು ಉರ್ದು ಶಿಕ್ಷಣ, ಶಾಲೆಗಳನ್ನು ಗಣನೀಯ ರೂಪದಲ್ಲಿ ಪರಿಗಣಿಸಬೇಕು, ಆದರೆ ಅದರ ಜೊತೆಗೆ, ರಾಜ್ಯದ ಮುಖ್ಯ ಭಾಷೆಯನ್ನೂ ಪರಿಗಣಿಸಬೇಕು ” ಎಂದಿದ್ದಾರೆ.

- Advertisement -

ʼಮುಸ್ಲಿಂ ಸಮುದಾಯವು ಉರ್ದು ಮೂಲಕ ಕಲೆ, ಕವನ ಮತ್ತು ಬರವಣಿಗೆ ಕ್ಷೇತ್ರಗಳಲ್ಲಿ ಭಾರೀ ಕೊಡುಗೆ ನೀಡಬಹುದು. ಅದರ ಸಾಮರ್ಥ್ಯ ಇದೆ. ಆದರೆ ಅದರ ಜೊತೆಗೇ ಸಮರ್ಪಕ ಬೆಂಬಲ ಮತ್ತು ಸಮಾನ ಅವಕಾಶದ ಅಗತ್ಯವೂ ಇದೆʼ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.



Join Whatsapp