ನವದೆಹಲಿ: ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಉದ್ಯಮಿ ಶಂಕರ್ ಮಿಶ್ರಾ ಬೆಂಗಳೂರಿನ ಅಡಗಿದ್ದ ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ಮಿಶ್ರಾ ಸೋದರಿ ವಾಸಿಸುತ್ತಿದ್ದು ಅಲ್ಲಿಗೆ ಶಂಕರ್ ಇತ್ತೀಚೆಗೆ ಬಂದಿದ್ದ ಎಂದು ಗೊತ್ತಾಗಿದೆ. ಹೀಗಾಗಿ ಮಿಶ್ರಾ ಬಂಧನಕ್ಕೆ ರಚಿಸಿರುವ 2 ತಂಡಗಳ ಪೈಕಿ 1 ತಂಡ ಬೆಂಗಳೂರಿನಲ್ಲಿದೆ ಹಾಗೂ ಮಿಶ್ರಾ ಸೋದರಿಯನ್ನು ವಿಚಾರಣೆಗೆ ಒಳಪಡಿಸಿದೆ.
ನಾಪತ್ತೆಯಾಗಿರುವ ಶಂಕರ್ ಮಿಶ್ರಾ, ಆತನಿಗೆ ಲುಕ್ ಔಟ್ ನೋಟಿಸ್ ಹೊರಡಿಸಲಾಗಿದ್ದು ಒಂದು ತಂಡವನ್ನು ಮಿಶ್ರಾ ಅವರ ತಂದೆ ವಾಸಿಸುವ ಮುಂಬೈಗೆ ಕಳುಹಿಸಲಾಗಿದೆ. ಇನ್ನೊಂದೆಡೆ ವಿಮಾನದ ಪೈಲಟ್ ಹಾಗೂ ಸಿಬ್ಬಂದಿ ಸೇರಿ 6 ಮಂದಿಯ ವಿಚಾರಣೆಗೆ ದಿಲ್ಲಿ ಪೊಲೀಸರು ನೋಟಿಸ್ ನೀಡಿದ್ದಾರೆ.
ನ್ಯೂಯಾರ್ಕ್-ನವದೆಹಲಿ ವಿಮಾನದಲ್ಲಿ ಮಹಿಳೆಯ ಮೇಲೆ ಕುಡಿದು, ಮೂತ್ರ ವಿಸರ್ಜನೆ ಮಾಡಿದ ಆರೋಪ ಶಂಕರ್ ಮಿಶ್ರಾ ಮೇಲಿದೆ. ಅವರ ವಿರುದ್ಧ ಲುಕ್ ಔಟ್ ನೋಟಿಸ್ ಕೂಡ ಬಿಡುಗಡೆ ಆಗಿದ್ದು, ದೆಹಲಿ ಪೊಲೀಸರು ಹುಡುಕುತ್ತಿದ್ದಾರೆ. ಇದರ ನಡುವೆ ಅವರು ತಮ್ಮ ವಕೀಲರ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದು, ‘ಈ ವಿಷಯವನ್ನು ಇತ್ಯರ್ಥಗೊಳಿಸಲಾಗಿದೆ. ಮಾತ್ರವಲ್ಲ ವೃದ್ಧ ಮಹಿಳೆಗೆ ಪೇಟಿಎಂ ಮೂಲಕ ಪರಿಹಾರವನ್ನು ಕೂಡ ನೀಡಲಾಗಿದೆ’ ಎಂದು ಹೇಳಿದ್ದಾರೆ.