ಬೆಂಗಳೂರು: ರಾಜ್ಯ ಸರ್ಕಾರ ಶಕ್ತಿ ಯೋಜನೆ ಅಡಿ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದೆ. ಇದರಿಂದ ಸಾರಿಗೆ ನಿಗಮಕ್ಕೆ ಸಾಕಷ್ಟು ಹೊರೆ ಆಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದರ ನಡುವೆಯೂ KSRTC ಶನಿವಾರ (ಜು.01) ನಿಗದಿತ ದಿನಾಂಕದಂದೇ ಸಿಬ್ಬಂದಿಗೆ ವೇತನ ಜಮಾ ಮಾಡಿದೆ.
ಒಂಬತ್ತು ತಿಂಗಳ ಹಿಂದೆ, ನಾವು ಎಲ್ಲಾ ಉದ್ಯೋಗಿಗಳಿಗೆ ಪ್ರತಿ ತಿಂಗಳ ಮೊದಲನೇ ತಾರೀಖಿನಂದು ವೇತನವನ್ನು ನೀಡುವುದಾಗಿ ಭರವಸೆ ನೀಡಿದ್ದೇವು. ಅದರಂತೆ ಪ್ರತಿ ತಿಂಗಳು ಒಂದನೇ ತಾರಿಕಿನಿಂದು ಸಿಬ್ಬಂದಿಗೆ ವೇತ ನೀಡಿದೇವು. ಇದು ಕೆಲವರಿಗೆ ದಿಗ್ಭ್ರಮೆಗೊಳಿಸಿತು. ಇದೀಗ ಶಕ್ತಿ ಯೋಜನೆ ಜಾರಿಯಾದ ನಂತರವೂ ನಾವು ಒಂದನೇ ತಾರಿಕಿನಂದೇ ವೇತನ ನೀಡುವ ಮೂಲಕ ನಾವು ಮಾತಿಗರ ಬದ್ಧರಾಗಿದ್ದೇವೆ ಎಂದು ಕೆಎಸ್ ಆರ್ ಟಿಸಿಯ ಹಿರಿಯ ಅಧಿಕಾರಿ ಹೇಳಿದರು.