ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯು ನಷ್ಟದ ಹಾದಿಯಲ್ಲಿದ್ದ KSRTCಗೆ ಮಹಿಳೆಯರಿಂದಲೇ ಕೋಟಿ ಕೋಟಿ ಆದಾಯ ಬರುತ್ತಿದೆ.
ಬಾಗಲಕೋಟೆ ಜಿಲ್ಲೆ ಒಂದರಿಂದಲೇ ಜೂನ್ ಹನ್ನೊಂದರಿಂದ ಜುಲೈ ಅಂತ್ಯದವರೆಗೆ ಮಹಿಳಾ ಪ್ರಯಾಣಿಕರಿಂದಲೇ ಬಂದ ಆದಾಯ 27 ಕೋಟಿ 74 ಲಕ್ಷ ದ 81 ಸಾವಿರ ರೂಪಾಯಿ. ಈ ಮೊತ್ತ ಕಂಡು ಕೆಎಸ್ಆರ್ಟಿಸಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಜೊತೆಗೆ ಇದು ಸರ್ಕಾರಿ ದಾಖಲೆಯ ಮೂಲಕವೇ ಲೆಕ್ಕಾಚಾರ ಹೊರಬಿದ್ದಿದ್ದು, ಇಷ್ಟು ಹಣ ಪಾವತಿ ಮಾಡಲು ಸರಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಪಿವ್ಹಿ ಮೇತ್ರಿ, ವಿಭಾಗೀಯ ಸಾರಿಗೆ ಅಧಿಕಾರಿ, ಕೆಎಸ್ಆರ್ಟಿಸಿ, ಬಾಗಲಕೋಟೆ ಅವರು ತಿಳಿಸಿದ್ದಾರೆ.
ಇಷ್ಟೊಂದು ಆದಾಯ ಸಂಗ್ರಹಕ್ಕೆ ಕಾರಣ ಮಹಿಳಾ ಬಸ್ ಪ್ರಯಾಣಿಕರ ಸಂಖ್ಯೆ ತೀರಾ ಹೆಚ್ಚಾಗಿರೋದು. ಯೋಜನೆಗೂ ಮೊದಲು ಪ್ರತಿದಿನ ಬಸ್ ನಲ್ಲಿ 2 ಲಕ್ಷ 3 ಸಾವಿರ ಜನರು ಪ್ರಯಾಣ ಮಾಡುತ್ತಿದ್ದರು.ಅದರಲ್ಲಿ 28 ಪ್ರತಿಶತ ಮಾತ್ರ ಮಹಿಳೆಯರು ಪ್ರಯಾಣ ಮಾಡುತ್ತಿದ್ದರು. ಆದರೆ ಶಕ್ತಿ ಯೋಜನೆ ಆರಂಭದ ನಂತರ ಬಸ್ ನಲ್ಲಿ ಪ್ರತಿದಿನ ಪ್ರಯಾಣಿಕರ ಸಂಖ್ಯೆ 3 ಲಕ್ಷ 22 ಸಾವಿರ ಇದೆ. ಇದರಲ್ಲಿ 1 ಲಕ್ಷ 85 ಸಾವಿರ ಮಹಿಳಾ ಪ್ರಯಾಣಿಕರಿದ್ದಾರೆ. ಶಕ್ತಿಯೋಜನೆ ಮೊದಲು ದಿನಾಲು 68 ಲಕ್ಷ ಆದಾಯ ಬರುತ್ತಿತ್ತು. ಶಕ್ತಿ ಯೋಜನೆ ಬಳಿಕ ಅದು 1 ಕೋಟಿ 3 ಲಕ್ಷಕ್ಕೆ ಏರಿಕೆಯಾಗಿದೆ.