ISF ಮಕ್ಕಾ ಅಧ್ಯಕ್ಷರಾಗಿ ಶಾಕಿರ್ ಹಕ್ ನೆಲ್ಯಾಡಿ, ಕಾರ್ಯದರ್ಶಿಯಾಗಿ ಆಸೀಫ್ ಕಲ್ಲಡ್ಕ ಆಯ್ಕೆ

Prasthutha|

ಮಕ್ಕಾ: ಇಂಡಿಯನ್ ಸೋಶಿಯಲ್ ಫೋರಮ್ ಮಕ್ಕಾ ಘಟಕ (ಕರ್ನಾಟಕ ಚಾಪ್ಟರ್ ) ಇದರ ನೂತನ ಕಾರ್ಯಕಾರಿ ಸಮಿತಿಯ ಸಭೆಯು ಇತ್ತೀಚಿಗೆ ಮಕ್ಕಾದಲ್ಲಿ ರಾಜ್ಯ ಸಮಿತಿಯ ಅಧ್ಯಕ್ಷ ಆಸೀಫ್ ಗಂಜೀಮಠ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

- Advertisement -

ಅದರಂತೆ ನೂತನ ಸಮಿತಿಗೆ ಅಧ್ಯಕ್ಷರಾಗಿ ಶಾಕಿರ್ ಹಕ್ ನೆಲ್ಯಾಡಿ , ಪ್ರಧಾನ ಕಾರ್ಯದರ್ಶಿ ಆಸೀಫ್ ಕಲ್ಲಡ್ಕ, ಉಪಾಧ್ಯಕ್ಷರಾಗಿ ಝೀಷನ್ ಮನ್ಸೂರ್ ಬಾಳೆಹೊನ್ನೂರ್, ಹಾಗೂ ಅನ್ಸಾರ್ ಕರೈ ಮತ್ತು ಮುತಾಹಿರ್ ಶಿವಮೊಗ್ಗ ಜತೆ ಕಾರ್ಯದರ್ಶಿಗಳಾಗಿ ಚುನಾಯಿತಾರಾದರು.

ಆಸೀಫ್ ಗಂಜೀಮಠ ಸಂಘಟನೆಯ ಕಾರ್ಯ ಚಟುವಟಿಕೆಗಳ ಸಂಕ್ಷಿಪ್ತ ವಿವರಣೆ ನೀಡಿದರು. ಫಾರೂಕ್ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

Join Whatsapp