ಶಹಜಹಾನ್’ಪುರ್ ನಕಲಿ ಎನ್ಕೌಂಟರ್| 18 ಪೊಲೀಸರ ವಿರುದ್ಧ FIR

Prasthutha|

- Advertisement -

ಶಹಜಹಾನ್’ಪುರ್: ಹದಿನೆಂಟು ವರ್ಷದ ಹಿಂದೆ ನಡೆದಿದ್ದ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಆಗಿನ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 18 ಪೊಲೀಸರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸ್ಥಳೀಯ ಜಲಾಲಬಾದ್ ಠಾಣೆಯಲ್ಲಿ 18 ಜನರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಅಪರಾಧ ವಿಭಾಗವು ತನಿಖೆ ನಡೆಸಲಿದೆ ಎಂದು ಶಹಜಹಾನ್ಪುರ್ ಎಸ್ಪಿ ಎಸ್.ಆನಂದ್ ಅವರು ತಿಳಿಸಿದರು.

- Advertisement -


ಬಾಧಿತರ ಪರ ವಕೀಲ ಇಜಾಜ್ ಹಸನ್ ಖಾನ್ ಈ ಬಗ್ಗೆ ಮಾಹಿತಿ ನೀಡಿ, ಕೃತ್ಯವು ಅಕ್ಟೋಬರ್ 3, 2004ರಲ್ಲಿ ನಡೆದಿತ್ತು. ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿದ್ದ ಶಂಕೆ ಮೇಲೆ ಚಾಚುಪುರ್ನ ನಿವಾಸಿಗಳಾದ ಪ್ರಹ್ಲಾದ್ ಮತ್ತು ಧನ್ಪಾಲ್ ಅವರನ್ನು ಪೊಲೀಸರು ಬಂಧಿಸಿದ್ದರು. ನಂತರ ಎನ್ಕೌಂಟರ್ನಲ್ಲಿ ಇಬ್ಬರೂ ಸತ್ತಿದ್ದು, ಪೊಲೀಸರೇ ಶವವನ್ನು ಹೊತ್ತೊಯ್ದಿದ್ದರು ಎಂದರು.

Join Whatsapp