ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 4 ದಿನಗಳಲ್ಲಿ 3 ವಿದ್ಯಾರ್ಥಿಗಳ ಆತ್ಮಹತ್ಯೆ: ಕ್ರಮಕೈಗೊಳ್ಳಲು ಎಸ್ ಎಫ್ ಐ ಆಗ್ರಹ

Prasthutha|

ಬೆಂಗಳೂರು: ದೇಶದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿ ಮತ್ತು ಎನ್’ಐಟಿಗಳಲ್ಲಿ ಫೆಬ್ರವರಿ 12ರಿಂದ 15 ರ ನಡುವೆ ಮೂರು ವಿದ್ಯಾರ್ಥಿಗಳ ಆತ್ಮಹತ್ಯೆಗಳ ತಲ್ಲಣಗೊಳಿಸುವ ವರದಿಗಳು ಬಂದಿವೆ. ಫೆಬ್ರವರಿ 12 ರಂದು ಮುಂಬೈ ಐಐಟಿಯಲ್ಲಿ ದರ್ಶನ್ ಸೋಲಂಕಿ, 13ರಂದು ಮದ್ರಾಸ್ ಐಐಟಿಯಲ್ಲಿ ಸ್ಟೆಫಾನ್ ಸನ್ನಿ ಮತ್ತು 15ರಂದು ಎನ್’ಐಟಿ ಕೊಝಿಕೋಡ್’ನಲ್ಲಿ ನಿತಿನ್ ಶರ್ಮ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳು. ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ವಿದ್ಯಾರ್ಥಿಗಳನ್ನು ಕೊಲ್ಲುವ ಸಂರಚನಾ ಅಸಮಾನತೆಗಳು, ತಾರತಮ್ಯ ಮತ್ತು ತೀವ್ರ ಶೈಕ್ಷಣಿಕ ಒತ್ತಡದ ಸಮಸ್ಯೆಗಳನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.

- Advertisement -


ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್’ಗಳಲ್ಲಿ ಇನ್ನಷ್ಟು ಆತ್ಮಹತ್ಯೆಗಳು ನಡೆಯಬಾರದು, ಇದಕ್ಕಾಗಿ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಎಸ್ ಎಫ್ ಐ ಆಗ್ರಹಿಸಿದೆ.


18 ವರ್ಷದ ದರ್ಶನ್ ಸೋಲಂಕಿ 3 ತಿಂಗಳ ಹಿಂದೆಯಷ್ಟೇ ಬಿ.ಟೆಕ್ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿದ್ದ. ಈ ಶಿಕ್ಷಣ ಸಂಸ್ಥೆಯಲ್ಲಿರುವ ಜಾತಿ ತಾರತಮ್ಯದ ವಾತಾವರಣ ಮತ್ತು ಈ ಕುರಿತು ಸಂಸ್ಥೆಯ ನಿರ್ವಾಹಕರ ತಿರಸ್ಕಾರದ ನಿಲುವು ಈ ವಿದ್ಯಾರ್ಥಿಯ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ. ಯಥಾಪ್ರಕಾರ ಐಐಟಿಯ ಉನ್ನತ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ. 24 ವರ್ಷದ ಸ್ಟೆಫಾನ್ ಸನ್ನಿ ಎಂಎಸ್ಸಿಸ ವಿದ್ಯಾರ್ಥಿ ಮತ್ತು 20 ವರ್ಷದ ನಿತಿನ್ ಶರ್ಮ ಬಿ.ಟೆಕ್ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.



Join Whatsapp