ಕಾಲೇಜು ಚುನಾವಣೆ ವಿಚಾರದಲ್ಲಿ ಘರ್ಷಣೆ: ಕೇರಳದ ಇಡುಕ್ಕಿಯಲ್ಲಿ SFI ಕಾರ್ಯಕರ್ತನ ಹತ್ಯೆ

Prasthutha|

ಇಡುಕ್ಕಿ (ಕೇರಳ): ಕಾಲೇಜು ಚುನಾವಣೆ ಸಂಬಂಧ SFI ಮತ್ತು KSU ಸಂಘಟನೆಗಳ ಕಾರ್ಯಕರ್ತರ ಮಧ್ಯೆ ಉಂಟಾದ ಸಂಘರ್ಷದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು  ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ಇಡುಕ್ಕಿಯಲ್ಲಿ ಸೋಮವಾರ ನಡೆದಿದೆ.

- Advertisement -

ಹತ್ಯೆಯಾದ ವಿದ್ಯಾರ್ಥಿ ಮೂಲತಃ ಕಣ್ಣೂರು ನಿವಾಸಿ ಧೀರಜ್ ಎಂದು ತಿಳಿದು ಬಂದಿದೆ.

ಕೆಲವು ದಿನಗಳ ಮೊದಲು ಚುನಾವಣೆಗೆ ಸಂಬಂಧಿಸಿ ಕಾಲೇಜಿನಲ್ಲಿ ವಿವಾದ ಪ್ರಾರಂಭವಾಗಿತ್ತು. ಸೋಮವಾರ ಮಧ್ಯಾಹ್ನ ಕೂಡ ಈ ವಿವಾದ ತಾರಕಕ್ಕೇರಿದ್ದು, ಉಭಯ ತಂಡಗಳ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಧೀರಜ್ ಗೆ ತಂಡ ಚೂರಿಯಿಂದ ಇರಿದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೋರ್ವ ಕಾರ್ಯಕರ್ತ ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

  ಪ್ರತಿ ವರ್ಷವೂ ಚುನಾವಣೆಗೆ ಸಂಬಂಧಿಸಿ ಈ ರೀತಿಯ ವಿವಾದಗಳು ಕಾಲೇಜಿನಲ್ಲಿ ನಡೆಯುತ್ತಿದ್ದವು. ಆ ಕಾರಣದಿಂದಲೇ ಕಾಲೇಜು ಅಧಿಕೃತರು ಯಾರೂ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎನ್ನಲಾಗಿದೆ.

Join Whatsapp