ಪ್ರಚೋದನಾಕಾರಿ ಉಡುಪು ಧರಿಸಿದ್ದರೆ ಮಹಿಳೆ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ನ್ಯಾಯಾಲಯದಲ್ಲಿ ನಿಲ್ಲದು: ಕೇರಳ ನ್ಯಾಯಾಲಯ

Prasthutha|

ತಿರುವನಂತಪುರಂ: ತನ್ನ ಮೇಳೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸುವ ಮಹಿಳೆಯು ಪ್ರಚೋದನಾಕಾರಿ ಉಡುಪನ್ನು ಧರಿಸಿದ್ದರೆ ಲೈಂಗಿಕ ಕಿರುಕುಳ ಆರೋಪ ಮೇಲ್ನೋಟಕ್ಕೆ ನಿಲ್ಲಲಾರದು ಎಂದು ಕೇರಳದ ನ್ಯಾಯಾಲಯವೊಂದು ತೀರ್ಪು ನೀಡಿದ್ದು, ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

ಸಾಮಾಜಿಕ ಕಾರ್ಯಕರ್ತ ಮತ್ತು ಲೇಖಕರಾಗಿರುವ ಚಂದ್ರನ್ ಅವರ ಬುಧವಾರ ಜಾಮೀನು ಅರ್ಜಿಯ ವಿಚಾರಣೆಯ ವೇಳೆ ಕೋಯಿಕ್ಕೋಡ್ ಸೆಷನ್ಸ್ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

- Advertisement -

ಚಂದ್ರನ್ ವಿರುದ್ಧ 2020ರಲ್ಲಿ ಯುವ ಬರಹಗಾರ್ತಿಯೊಬ್ಬರು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು. 2020ರ ಫೆಬ್ರವರಿ 8ರಂದು ನಂದಿ ಬೀಚ್ ಗೆ ಹೋಗಿದ್ದಾಗ ಚಂದ್ರನ್ ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆಕೆ ದೂರು ನೀಡಿದ್ದಳು.
ಆದರೆ ತಮ್ಮ ವಿರುದ್ಧದ ಆರೋಪವನ್ನು ತಳ್ಳಿ ಹಾಕಿದ 74 ವರ್ಷ ಪ್ರಾಯದ ಚಂದ್ರನ್ ಅವರು, ಅವರಿಬ್ಬರೂ ಬೀಚ್ ನಲ್ಲಿದ್ದ ಫೋಟೋಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು, ಯುವತಿಯ ಉಡುಪಿ ಲೈಂಗಿಕವಾಗಿ ಪ್ರಚೋದನಾಕಾರಿತ್ತು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಯುವತಿಯು ‘ಲೈಂಗಿಕವಾಗಿ ಪ್ರಚೋದನಾಕಾರಿ ಉಡುಪುಗಳನ್ನು ಧರಿಸಿದ್ದರಿಂದ’ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354A ಅಡಿಯಲ್ಲಿನ ಅಪರಾಧವು ಮಾನ್ಯವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

“ಆರೋಪಿಯು ಜಾಮೀನು ಅರ್ಜಿಯ ಜತೆಗೆ ಹಾಜರುಪಡಿಸಿರುವ ಚಿತ್ರಗಳು, ದೂರುದಾರೆಯು ಸ್ವತಃ ಲೈಂಗಿಕ ಪ್ರಚೋದನಾಕಾರಿಯಾಗಿರುವ ಕೆಲವು ಉಡುಪುಗಳನ್ನು ಧರಿಸಿದ್ದರು ಎಂಬ ವಾಸ್ತವವನ್ನು ಬಹಿರಂಗಪಡಿಸಿದೆ. ಹೀಗಾಗಿ ಆರೋಪಿ ವಿರುದ್ಧದ ಸೆಕ್ಷನ್ 354ಎ ಮೇಲ್ನೋಟಕ್ಕೆ ಸಿಂಧುವಾಗುವುದಿಲ್ಲ” ಎಂದು ಕೋರ್ಟ್ ಹೇಳಿದೆ.

ದೈಹಿಕವಾಗಿ ಅಂಗವೈಕಲ್ಯ ಹೊಂದಿರುವ 74 ವರ್ಷದ ಚಂದ್ರನ್ ಅವರು, ಬೇರೊಬ್ಬ ವ್ಯಕ್ತಿಯ ಮೇಲೆ ಬಲಾತ್ಕಾರ ನಡೆಸಲು ಸಾಧ್ಯ ಎನ್ನುವುದು ನಂಬಲು ಸಾಧ್ಯವಿಲ್ಲ ಎಂದು ಸಹ ಅಭಿಪ್ರಾಯಪಟ್ಟಿದೆ.

- Advertisement -