ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ; ವೈದ್ಯ ನ ವಿರುದ್ಧ ದೂರು ದಾಖಲು

Prasthutha|

ಭಟ್ಕಳ: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವೈದ್ಯನೊಬ್ಬನ ವಿರುದ್ಧ ಪೊಕ್ಸೊ ಕಾಯ್ದೆಯಡಿ ದೂರು ದಾಖಲಾಗಿದೆ.

- Advertisement -

ಆರೋಪಿ ವೈದ್ಯನನ್ನು ಡಾ. ಶೈಲೇಶ್ ಎಂ. ದೇವಾಡಿಗ ಎಂದು ಗುರುತಿಸಲಾಗಿದೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವನಾಗಿರುವ ಡಾ. ಶೈಲೇಶ್ ಆಯುರ್ವೇದ ವೈದ್ಯನಾಗಿದ್ದಾನೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಆತ ತಲೆಮರೆಸಿಕೊಂಡಿದ್ದಾನೆ.

ಆರೋಪಿ ಡಾ. ಶೈಲೇಶ್ ಡಿಸೆಂಬರ್ 1ರಂದು ಏಳು ವರ್ಷದ ಬಾಲಕನನ್ನು ತನ್ನ ರೂಮ್’ಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ.

- Advertisement -

ಆರೋಪಿ ವೈದ್ಯ ತಮ್ಮ ನಿವಾಸದ ರೂಮ್ ಒಂದರಲ್ಲಿ ಬಾಡಿಗೆಗೆ ಇದ್ದು, ಕುಟುಂಬದ ಸದಸ್ಯರಿಗೆಲ್ಲ ಪರಿಚಿತ ವ್ಯಕ್ತಿಯಾಗಿದ್ದಾನೆ ಎಂದು ಸಂತ್ರಸ್ತ ಬಾಲಕನ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

ಸಂತ್ರಸ್ತ ಬಾಲಕನ ಪೋಷಕರ ದೂರಿನನ್ವಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿ ವೈದ್ಯನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Join Whatsapp