ಹೈದರಾಬಾದ್: ದೇಶದಲ್ಲಿ ಲಕ್ಷಾಂತರ ಡೋಸ್ ಕೋವಿಡ್ ಲಸಿಕೆ ನೀಡಿದ್ದರೂ, ಲಸಿಕೆಯ ತೀವ್ರ ಅಡ್ಡ ಪರಿಣಾಮದಿಂದಾಗಿ ಮೃತಪಟ್ಟವರ ಸಂಖ್ಯೆ ದೃಢಪಟ್ಟಿರುವುದು ಕೇವಲ ಒಂಬತ್ತು ಎಂದು ಆರೋಗ್ಯ ಸಚಿವಾಲಯದ ಲಸಿಕೆ ಬಳಿಕದ ಅಡ್ಡಪರಿಣಾಮಗಳ ಬಗೆಗಿನ ಸಮಿತಿ (ಎಇಎಫ್ಐತ) ಹೇಳಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಲಸಿಕೆ ಉತ್ಪನ್ನ ಸಂಬಂಧಿ ಅಡ್ಡ ಪರಿಣಾಮಗಳಿಂದ ಮಹಾರಾಷ್ಟ್ರ ತೆಲಂಗಾಣ, ಹಾಗೂ ಜಮ್ಮು ಕಾಶ್ಮೀರದಲ್ಲಿ ತಲಾ ಎರಡು ಸಾವುಗಳು ಹರ್ಯಾಣ, ಛತ್ತೀಸ್ಗಮಢ ಮತ್ತು ಕೇರಳದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಪೈಕಿ ಕೋವಿಶೀಲ್ಡ್ ಅಡ್ಡ ಪರಿಣಾಮದಿಂದ ಮೃತಪಟ್ಟವರು ಎಂಟು ಮಂದಿ ಮತ್ತು ಕೊವ್ಯಾಕ್ಸಿನ್ ಅಡ್ಡ ಪರಿಣಾಮದಿಂದ ಮೃತಪಟ್ಟವರು ಒಬ್ಬರು ಎಂದು ತಿಳಿದು ಬಂದಿದೆ.
ಇದುವರೆಗೆ ಭಾರತದಲ್ಲಿ ಮೊದಲ ಡೋಸ್, ಎರಡನೇ ಡೋಸ್ ಹಾಗೂ ಬೂಸ್ಟರ್ ಡೋಸ್ ಸೇರಿ 186 ಕೋಟಿ ಲಸಿಕಾ ಶಾಟ್ಗೆಳನ್ನು ನೀಡಲಾಗಿದೆ.