ಭದ್ರತಾ ಸಿಬ್ಬಂದಿಗೆ ಮೆಣಸಿನ ಹುಡಿ ಎರಚಿ ಜೈಲಿನಿಂದ ಏಳು ಖೈದಿಗಳು ಪರಾರಿ!

Prasthutha: July 13, 2021

ಗುವಾಹಟಿ: ಜೈಲಿನ ಸಿಬ್ಬಂದಿಗೆ ಹಲ್ಲೆ ನಡೆಸಿ, ಮೆಣಸಿನ ಪುಡಿ ಎರಚಿ ಏಳು ಮಂದಿ ಖೈದಿಗಳು ಜೈಲಿನಿಂದ ಪರಾರಿಯಾದ ಘಟನೆ ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯ ಜೈಲಿನಲ್ಲಿ ನಡೆದಿದೆ.

ಜೈಲಿನಿಂದ ಪರಾರಿಯಾದ ಖೈದಿಗಳನ್ನು ಅಭಿಜಿತ್ ಗೊಗೋಯ್, ತಾರೊ ಹಮಾಮ್, ಕಲೋಮ್ ಅಪಾಂಗ್, ತಲುಮ್ ಪನ್ಯಾಂಗ್, ಸುಭಾಶ್ ಮೊಂಡಲ್, ರಾಜ ತಯೆಂಗ್ ಮತ್ತು ದನಿ ಗಮ್ಲಿನಾ ಎಂದು ಗುರುತಿಸಲಾಗಿದೆ. ಈ ಖೈದಿಗಳು ಮೊದಲೇ ಮೆಣಸಿನ ಹುಡಿ ಮತ್ತು ಉಪ್ಪನ್ನು ಸಂಗ್ರಹಿಸಿ ಜೈಲಿನಿಂದ ಪರಾರಿಯಾಗಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ.

ಊಟಕ್ಕಾಗಿ ಸೆಲ್ ತೆರೆದಾಗ ಈ ಏಳು ಮಂದಿ ಭದ್ರತಾ ಸಿಬ್ಬಂದಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಐದು ಮಂದಿ ಜೈಲು ಸಿಬ್ಬಂದಿಗೆ ಗಾಯಗಳಾಗಿದ್ದು, ಓರ್ವನ ತಲೆಗೆ ಗಂಭೀರವಾಗಿ ಏಟಾಗಿದೆ. ಸಿಬ್ಬಂದಿಯ ಮೊಬೈಲ್ ಫೋನನ್ನು ಕೂಡಾ ಖೈದಿಗಳು ಕೊಂಡೊಯ್ದಿದ್ದಾರೆ. ಪರಾರಿಯಾಗಿರುವ ಖೈದಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ