ಟ್ರಕ್ –ಜೀಪ್ ನಡುವೆ ಅಪಘಾತ: ಏಳು ಮಂದಿ ಮೃತ್ಯು

Prasthutha|

ಅಹಮದಾಬಾದ್: ಟ್ರಕ್ ಹಾಗೂ ಜೀಪ್ ನಡುವೆ ಅಪಘಾತ ಸಂಭವಿಸಿ ನಾಲ್ವರು ಮಹಿಳೆಯರು ಸೇರಿದಂತೆ ಏಳು ಮಂದಿ ಮೃತಪಟ್ಟಿರುವ ಘಟನೆ ಗುಜರಾತ್’ನ ಪಟಾನ್ ಜಿಲ್ಲೆಯಲ್ಲಿ ನಡೆದಿದೆ.

- Advertisement -


ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.


ಸಂಜುಭಾಯ್ ಫುಲ್ವಾಡಿ (50), ದೂದಾಭಾಯಿ ರಾಥೋಡ್ (50), ರಾಧಾಬೆನ್ ಪರ್ಮಾರ್ (35), ಕಾಜಲ್ ಪರ್ಮಾರ್ (59), ಸೀಮಾಬೆನ್ ಮಿಥುನ್ಭಾಯ್ ವಂಜಾರಾ (24) ಅಮೃತಾ ವಂಜಾರಾ (15), ಪಿನಾಲ್ಬೆನ್ ವಂಜಾರಾ (7) ಮೃತರು ಎಂದು ಗುರುತಿಸಲಾಗಿದೆ.

- Advertisement -


ರಾಧನ್ಪುರ ಬಳಿ ಜೀಪ್’ನಲ್ಲಿ ಸುಮಾರು 15 ಮಂದಿ ಪ್ರಯಾಣಿಸುತ್ತಿದ್ದರು. ಜೀಪ್’ನ ಟೈರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಜೀಪ್ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ನಿಂತಿದ್ದ ಟ್ರಕ್’ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಅಧಿಕಾರಿ ಕೆ.ಕೆ. ಪಾಂಡ್ಯ ತಿಳಿಸಿದ್ದಾರೆ.

Join Whatsapp