ಕಾರು ಡಿಕ್ಕಿ : ಏಳು ಜಾನುವಾರುಗಳ ಸಾವು

Prasthutha|

ಶಿವಮೊಗ್ಗ : ರಸ್ತೆಯಲ್ಲಿ ಗುಂಪಾಗಿ ಸಾಗುತ್ತಿದ್ದ ಮೂರು ಕೋಣ ಹಾಗೂ ಐದು ಎಮ್ಮೆಗಳ  ಗುಂಪುಗಳಿಗೆ ಕಾರು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ 7 ಮೂಕ ಪ್ರಾಣಿಗಳು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಸಾಗರ ರಸ್ತೆಯ ಸೇತುವೆ ಬಳಿ ನಡೆದಿದೆ.

- Advertisement -

ಕಾರಿನ ಚಾಲಕ ಮತ್ತು ಪ್ರಯಾಣಿಕರು ಪರಾರಿಯಾಗಿದ್ದು, ಪ್ರಾಣಿಗಳ ಮೃತ ದೇಹವನ್ನು ಸಾರ್ವಜನಿಕರು ರಸ್ತೆಯ ಮಗ್ಗುಲಿಗೆ ಎಳೆದು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಎಮ್ಮೆಗಳು ಗಾಡಿಕೊಪ್ಪದ ನಿವಾಸಿ ಮಂಜುನಾಥ ಎಂಬುವವರಿಗೆ ಸೇರಿದ್ದು ಎಂದು ಹೇಳಲಾಗುತ್ತಿದ್ದು, ಡಿಕ್ಕಿ ಹೊಡೆದ ವಾಹನವನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಸಿದ್ದಾರೆ.



Join Whatsapp