ಚರ್ಚೆಗೆ ದಿನ ಹಾಗೂ ಸಮಯ ನಿಗದಿ ಮಾಡಿ: ಡಿಕೆ ಶಿವಕುಮಾರ್

Prasthutha|

ಬೆಂಗಳೂರು: ನಾನು ಚರ್ಚೆಗೆ ಬರಲು ಸಿದ್ಧನಿದ್ದು, ದಿನ ಹಾಗೂ ಸಮಯ ನಿಗದಿ ಮಾಡಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

- Advertisement -

ಬೆಂಗಳೂರಿನಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೆಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಯ ಬಗ್ಗೆ ಪ್ರತಿಕ್ರಿಯೆ ನೀಡಿದರು. ಅವರು ಏನೋ ಹೇಳೋದು ನಾನು ಏನೋ ಹೇಳೋದು. ಗಾಳಿಯಲ್ಲಿ ಗುಂಡು ಹೊಡೆಯೋದೆಲ್ಲ ಬೇಡ. ಅವರು ಚರ್ಚೆಗೆ ಟೈಮ್ ಫಿಕ್ಸ್ ಮಾಡಲಿ. ನವೆಂಬರ್ 1ರ ನಂತರ ಯಾವಾಗ ಬೇಕಾದರು ಫಿಕ್ಸ್ ಮಾಡಲಿ. ನಾನು ಚರ್ಚೆಗೆ ಸಿದ್ಧನಿದ್ದೇನೆ, ಏನು ಉತ್ತರ ಕೊಡಬೇಕೋ ಅಲ್ಲೇ ಕೊಡ್ತೀನಿ ಎಂದು ಹೇಳಿದ್ದಾರೆ.