6 ಗಂಟೆಗಳ ಸರ್ವರ್ ಡೌನ್ಗೆ ನೆಟ್ಟಿಗರ ಪರದಾಟ ! ಬಳಕೆದಾರರ ಕ್ಷಮೆ ಕೋರಿದ ಫೇಸ್ ಬುಕ್

Prasthutha|

ಸತತ ಆರು ಗಂಟೆಗಳ ಕಾಲ ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಂ ದಿಢೀರನೆ ಡೌನ್ ಆಗಿ ಬಳಕೆದಾರರು ಪರದಾಡಿದ್ದಾರೆ. ಅ.4ರ ರಾತ್ರಿ ದಿಢೀರ್ ಸರ್ವರ್ ಡೌನ್ ಆದ ಕಾರಣ ವಿಶ್ವದಾದ್ಯಂತ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಬೆಳಗ್ಗಿನ ಜಾವ 3 ರ ನಂತರ ಎಲ್ಲ ಆಪ್ ಗಳ ಸರ್ವರ್ ಸಹಜ ಸ್ಥಿತಿಗೆ ಮರಳಿದೆ.

- Advertisement -

ಆಪ್ ಗಳಲ್ಲೆವೂ ಡೌನ್ ಆದುದರ ಪರಿಣಾಮ ನೆಟ್ಟಿಗರು ಟ್ವಿಟರ್ ಮೂಖಾಂತರ ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಂ ಸರ್ವರ್ ಡೌನ್ ಕುರಿತು ಲಕ್ಷಾಂತರ ಟ್ವೀಟ್ ಮಾಡಿದ್ದಾರೆ. ಎಲ್ಲಾ ಬಳಕೆದಾರರು ಟ್ವಿಟರ್ ಗೆ ಮುಗಿಬಿದ್ದ ಪರಿಣಾಮ ಕೆಲಕಾಲ ಟ್ವಿಟರ್ ಸರ್ವರ್ ಡೌನ್ ಆಗಿದೆ. ಅಲ್ಲದೇ ಟ್ವಿಟರ್ ಈ ಸಂದರ್ಭ ಸಾರ್ವಕಾಲಿಕ ಬಳಕೆದಾರರನ್ನು ಒಂದೇ ಸಮಯದಲ್ಲಿ ಹೊಂದಿ ದಾಖಲೆ ನಿರ್ಮಿಸಿದೆ.

ಸರ್ವರ್ ಡೌನ್ ಕುರಿತು ಪ್ರತಿಕ್ರಿಯಿಸಿರುವ ಫೇಸ್ ಬುಕ್ ನಮ್ಮ ಮೇಲೆ ಅವಲಂಬಿತವಾಗಿರುವ ಪ್ರಪಂಚದಾದ್ಯಂತದ ಜನರು ಮತ್ತು ವ್ಯವಹಾರಗಳ ಬೃಹತ್ ಸಮುದಾಯಕ್ಕೆ : ನಮ್ಮನ್ನು ಕ್ಷಮಿಸಿ. ನಮ್ಮ ಅಪ್ಲಿಕೇಶನ್‌ಗಳು ಮತ್ತು ಸೇವೆಗಳು ಪುನಃಸ್ಥಾಪಿಸಲು ನಾವು ಶ್ರಮಿಸುತ್ತಿದ್ದೇವೆ ಮತ್ತು ಆನ್‌ಲೈನ್‌ಗೆ ಹಿಂದಿರುಗುತ್ತಿದ್ದೇವೆ ಎಂದು ವರದಿ ಮಾಡಲು ಸಂತೋಷವಾಗುತ್ತಿದೆ, ನಮ್ಮೊಂದಿಗೆ ಸಹಕರಿಸಿದಕ್ಕಾಗಿ ಧನ್ಯವಾದಗಳು ಎಂದು ಟ್ವೀಟ್ ಮಾಡಿದೆ.

- Advertisement -

Join Whatsapp