ಹೈದರಾಬಾದ್ : 18 ಮಹಿಳೆಯರನ್ನು ಸರಣಿ ಹತ್ಯೆಗೈದ ಆರೋಪದಲ್ಲಿ 45 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಪತ್ನಿ ವಿವಾಹವಾದ ಕೆಲವೇ ದಿನಗಳಲ್ಲಿ ತನ್ನಿಂದ ದೂರವಾಗಿ, ಬೇರೊಬ್ಬನನ್ನು ಮದುವೆಯಾಗಿರುವ ಹಿನ್ನೆಲೆಯಲ್ಲಿ ಆತ ಈ ಕೃತ್ಯ ಎಸಗುತ್ತಿದ್ದನೆನ್ನಲಾಗಿದೆ.
ಹೈದರಾಬಾದ್ ನ ರಚಕೊಂಡ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸರಣಿ ಹತ್ಯೆ ಆರೋಪಿಯನ್ನು ಮೈನಾ ರಾಮುಲು ಎಂದು ಗುರುತಿಸಲಾಗಿದೆ.
ಮಹಿಳೆಯರ ಸರಣಿ ಕೊಲೆ ಮಾತ್ರವಲ್ಲದೆ, ಇತರ ಅಪರಾಧ ಚಟುವಟಿಕೆಗಳಲ್ಲೂ ಈತ ಭಾಗಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಕಲ್ಲು ಕ್ವಾರೆಯೊಂದರಲ್ಲಿ ಈಕ ಕೆಲಸ ಮಾಡುತ್ತಿದ್ದ.
21 ವರ್ಷದಲ್ಲೇ ವಿವಾಹವಾಗಿದ್ದ ಈತನನ್ನು ಪತ್ನಿ ಬಿಟ್ಟು ಹೋಗಿದ್ದಳು. ಹೀಗಾಗಿ ಮಹಿಳೆಯರ ಮೇಲೆ ಈತ ದ್ವೇಷ ಸಾಧಿಸುತ್ತಿದ್ದ ಎಂಬುದು ತನಿಖೆಯ ವೇಳೆ ಗೊತ್ತಾಗಿದೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.
ಸದ್ಯ 2 ಕೊಲೆ ಪ್ರಕರಣಗಳು ಸಾಬೀತಾಗಿವೆ. 16 ಪ್ರಕರಣಗಳ ತನಿಖೆ ಪ್ರಗತಿಯಲ್ಲಿವೆ. ಆಸ್ತಿಗೆ ಸಂಬಂಧಿಸಿದ ಗಲಭೆ ಸೇರಿ ಒಟ್ಟು 21 ಪ್ರಕರಣಗಳು ಈತನ ಮೇಲೆ ದಾಖಲಾಗಿದೆ.