“ಸೆಪ್ಟೆಂಬರ್ 13” ಸೆಟ್ಟೇರಲಿದೆ ಕೊರೋನಾ ಕಥಾ ಹಂದರದ ಹೊಸ ಚಿತ್ರ

Prasthutha|

ಬೆಂಗಳೂರು; “ ಸಿನೆಮಾದಲ್ಲಿ ನಾಯಕಿ, ಜತೆಗೆ ರೋಮ್ಯಾನ್ಸ್ ಬೇರೆ. ಆದರೆ ವಾಸ್ತವ ಬದುಕಿನಲ್ಲಿ ನಾಯಕಿಯನ್ನು ನಾಯಕ ಅಕ್ಕಾ ಎಂದು ಕರೆದರೆ ಹೇಗೆ?”. 

- Advertisement -

ಇದು “ ಸೆಪ್ಟಂಬರ್ 13 “ ಎಂಬ ಹೊಸ ಸಿನೆಮಾ ನಟಿಯ ಅಳಲು, ನಟಿ ಶ್ರೇಯಾ ರಿತಿವನ್ ತಮ್ಮ ನಾಯಕನಿಗೆ ಚಿತ್ರೀಕರಣ ಇಲ್ಲದ ಬಿಡುವಿನ ಸಮಯದಲ್ಲಿ ಕರೆ ಮಾಡಿದರೆ ನಾಯಕ ಚಿಂತನ್ ರಾವ್ ಹೇಳಿ ಅಕ್ಕಾ ಎಂದು ಸಂಭಾಷಣೆ ಮುಂದುವರೆಸುತ್ತಾನಂತೆ… 

ಇಬ್ಬರೂ ಚೆಲ್ಲು ಚೆಲ್ಲಾದ ಯುವಕ, ಯುವತಿಯರು. ಇಬ್ಬರಿಗೂ ಇದು ಮೊದಲ ಸಿನೆಮಾ ಅನುಭವ. ಶೂಟಿಂಗ್ ಆರಂಭವಾಗಿದೆ. ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಯುತ್ತಿದೆ. ಇನ್ನೂ ರೋಮ್ಯಾನ್ಸ್ ಸೀನುಗಳ ಚಿತ್ರೀಕರಣ ಬಾಕಿ ಇದೆ. ನಾಯಕಿ ಶ್ರೇಯಾಗೆ ನಾಯಕ ಅಕ್ಕಾ ಎಂದು ಕರೆಯುವುದು ಮುಜುಗರವಂತೆ. ಇದನ್ನು ಶುಕ್ರವಾರ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಶ್ರೇಯಾ ಹೇಳಿಕೊಂಡಿದ್ದು ಗಮನ ಸೆಳೆಯಿತು. ನಾಯಕ ಬೇರೆ ಯಾರೂ ಅಲ್ಲ. ಸಂಯುಕ್ತ ಕರ್ನಾಟಕ ಪತ್ರಿಕೆಯ ಮುಖ್ಯ ವರದಿಗಾರ ನರಸಿಂಹ ರಾವ್ ಪುತ್ರ.

- Advertisement -

ನರಸಿಂಹ ಅವರ ಸಹೋದರ ಧಾರವಾಡದ ಹಿರಿಯ ರಂಗಕರ್ಮಿ ರಾಘವೇಂದ್ರ ಮತ್ತಿತರಿಂದ ಚಿಂತನ್ ಗೆ ನಟನೆ ಬಳುವಳಿಯಾಗಿ ಬಂದಿದೆ. ಸಹಜವಾಗಿಯೇ ಅಭಿನಯಿಸುವ ಈತನಿಗೆ ಈಗಾಗಲೇ ಹೊಸ ಚಿತ್ರಗಳಿಗೆ ಬೇಡಿಕೆ ಬರುತ್ತಿದೆ. ನಾಯಕನಿಗಿರುವ ಮೈಕಟ್ಟು, ಎತ್ತರ, ಬಣ್ಣ, ಅಂದ, ಉತ್ತಮ ನಡವಳಿಕೆ ಎಲ್ಲವನ್ನೂ ಹೊಂದಿರುವಾತ. ಚಿಂತನ್ ಕಂಡರೆ “ ಸೆಪ್ಟಂಬರ್ 13 “ ಚಿತ್ರತಂಡದವರಿಗೆ ಅಚ್ಚು ಮೆಚ್ಚು. 

ನಗರದ ಪ್ರೆಸ್ ಕ್ಲಬ್ ನಲ್ಲಿ ಇತ್ತೀಚೆಗೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರು ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಸಂಕೋಚ ಸ್ವಭಾವದ ನಾಯಕ ನಟ ಚಿಂತನ್ ಗೈರು ಹಾಜರಾಗಿದ್ದರು. ಸಂಗೀತ ನಿರ್ದೇಶಕ ಸುರೇಶ್ ಪೀಟರ್, ನಿರ್ದೇಶಕ ರಾಜಾ ಬಾಲಕೃಷ್ಣ, ಚಿತ್ರದ ನಿರ್ಮಾಪಕರು, ಸಹ ನಿರ್ಮಾಪಕರು, ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ನಾಯಕಿ ಶ್ರೇಯಾ ಮಾತನಾಡಿ. ನಾಯಕ ಚಿಂತನ್ ನ ನಡಾವಳಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಕಂಡ ಹುಡುಗರಲ್ಲೇ ಚಿಂತನ್ ಸಭ್ಯತೆಯ ಪ್ರತೀಕವಾಗಿದ್ದಾನೆ. ಆತನೊಂದಿಗೆ ನಟಿಸುವುದು ನಿಜಕ್ಕೂ ತಮಗೆ ಸಂತಸದ ವಿಷಯ ಎಂದರು.

ಚಿತ್ರ ನಿರ್ಮಾಪಕರಾದ ಐವಾನ್ ಡಿಸೋಜಾ ಅವರು ನಮ್ಮ ಕುಟುಂಬ ಸ್ನೇಹಿತರು. ಒಮ್ಮೆ ಅವರು ನನ್ನನ್ನು ನೋಡಿ ನಿನಗೆ ನಟಿಯಾಗುವ ಎಲ್ಲಾ ಅರ್ಹತೆ ಇದೆ ಎಂದು ಭವಿಷ್ಯ ನುಡಿಸಿದ್ದರು. ವಿಶೇಷ ಎಂದರೆ ಅವರ ಚಿತ್ರದಲ್ಲೇ ನಾನು ನಟಿಸುಂವಂತಾಗಿದೆ. ಚಲನಚಿತ್ರ ರಂಗ ಪ್ರವೇಶಿಸುತ್ತೇನೆ ಎಂಬ ಕಲ್ಪನೆ ಸ್ವತಃ ತಮಗೂ ಇರಲಿಲ್ಲ. ಅಂಕಲ್ ಐವಾನ್ ಡಿಸೋಜಾ ಅವರಿಂದಾಗಿ ಈ ಕ್ಷೇತ್ರಕ್ಕೆ ಬರುವಂತಾಗಿದೆ ಎಂದರು.

ಸೆಪ್ಟೆಂಬರ್ 13 ಚಿತ್ರ ಕೋರನಾ ಸಂಕಷ್ಟಗಳ ಕಥಾ ಹಂದವರನ್ನು ಒಳಗೊಂಡಿದೆ. ಕೊರೋನಾ ಕಥೆಯ ಮೂಲಕ ಚಿತ್ರದಲ್ಲಿ ಹೊಸತನವನ್ನು ಕೊಡಲು ತಂಡ ಸಜ್ಜಾಗಿದೆ.

ಡಾ. ರಾಜಾ ಬಾಲಕೃಷ್ಣ ನಿರ್ದೇಶನದ ಸಿನೆಮಾಗೆ ಮಾಜಿ ಶಾಸಕ ಐವಾನ್ ನಿಗ್ಲಿ “ ರೂಬಿ ಫಿಲಂಸ್” ಬ್ಯಾನರ್ ನಡಿ ನಿರ್ಮಾಪಕವಾಗುತ್ತಿದ್ದಾರೆ. ಜಯನ್ ಉನ್ನಿನಾಥನ್, ಶೈಲ ಉನ್ನಿನಾಥನ್, ಡಾ. ಸಿರಿಕ್ ಎಡ್ವರ್ಡ್ಸ್, ಡಾ. ಸಿ.ಬಿ. ಅಲೆಕ್ಸ್ ಸಹ ನಿರ್ಮಾಪಕರಾಗಿದ್ದಾರೆ.

ಹಿರಿಯ ನಟಿ ವಿನಯಾ ಪ್ರಸಾದ್, ದಿನೇಶ್ ಬಾಬು, ಜೈ ಜಗದೀಶ್, ಮಳಯಾಳಂ ನಟ ಸ್ಟಡಿಕಂ ಜಾರ್ಜ್ ಮತ್ತಿತರರು ತಾರಾ ಬಳಗದಲ್ಲಿದ್ದಾರೆ.

Join Whatsapp