ಸೆ. 8ರಂದು ಫರಂಗಿಪೇಟೆಯಲ್ಲಿ “ಡ್ರಗ್ಸ್ ಮುಕ್ತ ಗ್ರಾಮ“ ಕಾರ್ಯಕ್ರಮ

Prasthutha|

ಬಂಟ್ವಾಳ, ಪುದು, ತುಂಬೆ ಮತ್ತು ಅಡ್ಯಾರ್ ಈ ಮೂರು ಗ್ರಾಮಗಳ 20 ಜಮಾತ್ ಹಾಗೂ ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ (ರಿ.) ಫರಂಗಿಪೇಟೆ ಇದರ ಜಂಟಿ ಆಶ್ರಯದಲ್ಲಿ ಮಾದಕ ವಸ್ತುಗಳ ಬಳಕೆಯ ವಿರುದ್ಧ ಜನಜಾಗೃತಿ ಮೂಡಿಸಲು ಸೆಪ್ಟೆಂಬರ್ 08 ಶುಕ್ರವಾರ ಮಧ್ಯಾಹ್ನ 02:30 ಗಂಟೆಗೆ ಫರಂಗಿಪೇಟೆಯ ಜಂಕ್ಷನ್ ನಲ್ಲಿ ಡ್ರಗ್ಸ್ ಮುಕ್ತ ಗ್ರಾಮ ಜನಜಾಗೃತಿ ಅಭಿಯಾನ ವನ್ನು ಏರ್ಪಡಿಸಲಾಗಿದೆ.

- Advertisement -

ಜಾಗೃತಿ ಕಾರ್ಯಕ್ರಮದಲ್ಲಿ ಶಾಲಾ/ಕಾಲೇಜು ವಿದ್ಯಾರ್ಥಿಗಳಿಂದ ಬೀದಿ ನಾಟಕ, ಹಲವು ಸಂಘ ಸಂಸ್ಥೆಗಳ ನೇತೃತ್ವದಲ್ಲಿ ವಾಹನ ಜಾಥಾ, ಜನಸಾಮಾನ್ಯರಿಗೆ ಅರಿವು ಮೂಡಿಸುವ ಸಲುವಾಗಿ ಬೃಹತ್ ಜಾಗೃತಿಸಭೆ ಆಯೋಜಿಸಲಾಗಿದೆ.

ಇದೇ ಸಂದರ್ಭದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರಿಂದ ಜಾಗೃತಿ ಸಂದೇಶ, ವೈದ್ಯಕೀಯ ತಜ್ಞರು ಹಾಗೂ ಪೊಲೀಸ್ ಇಲಾಖೆಯ ವರಿಷ್ಠರಿಂದ ಸಂವಾದ ಕಾರ್ಯಕ್ರಮ ನಡೆಯಲಿದೆ.

- Advertisement -

ಈ ಮೂರು ಗ್ರಾಮಕ್ಕೆ ಒಳಪಟ್ಟ ಶಾಲಾ/ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನಾಗರಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp