ಜಮಾಅತೆ ಇಸ್ಲಾಮಿ ಹಿಂದ್ ಹಿರಿಯ ಸದಸ್ಯ ಎಂ. ಸಾದುಲ್ಲಾ ನಿಧನಕ್ಕೆ ಮುಸ್ಲಿಮ್ ಒಕ್ಕೂಟ ಸಂತಾಪ

Prasthutha|

ಮಂಗಳೂರು: ಮಂಗಳೂರು ಕಂದಕ ನಿವಾಸಿ, ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಇದರ ಹಿರಿಯ ಸದಸ್ಯ, ಸನ್ಮಾರ್ಗ ವಾರ ಪತ್ರಿಕೆಯ ಸ್ಥಾಪಕ ಸದಸ್ಯ, ಉರ್ದು ಅರೇಬಿಕ್ ವಿದ್ವಾಂಸ, ಸಮಾಜ ಸೇವಕ, ಕೌಟುಂಬಿಕ ಸಮಾಲೋಚಕರೂ ಆಗಿದ್ದ ಎಂ. ಸಾದುಲ್ಲಾ ಅವರ ನಿಧನಕ್ಕೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಕೆ.ಅಶ್ರಫ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

- Advertisement -

ಎಂ. ಸಾದುಲ್ಲಾರ ನಿಧನದಿಂದ ಹಿರಿಯ ಧಾರ್ಮಿಕ ಸೇವಾ ಕೊಂಡಿಯೊಂದು ಕಳಚಿ ಕೊಂಡಿದ್ದು, ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಕುಟುಂಬಕ್ಕೆ ಅವರ ಅಗಲಿಕೆಯನ್ನು ತಾಳುವ ಶಕ್ತಿಯನ್ನು ಅಲ್ಲಾಹು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಸಂತಾಪ ಸೂಚಕ ಹೇಳಿಕೆಯಲ್ಲಿ ಅಶ್ರಫ್ ತಿಳಿಸಿದ್ದಾರೆ.



Join Whatsapp