ಸಿಪಿಐ ಹಿರಿಯ ನಾಯಕ ಕೇದಾರನಾಥ್ ಪಾಂಡೆ ನಿಧನ

Prasthutha|

ನವದೆಹಲಿ: ಸಿಪಿಐ ಹಿರಿಯ ನಾಯಕ, ಬಿಹಾರದ ಶಾಸಕ ಕೇದಾರನಾಥ್ ಪಾಂಡೆ ನಿಧನರಾಗಿದ್ದಾರೆ.

- Advertisement -

ಅವರಿಗೆ 79 ವರ್ಷ ವಯಸ್ಸಾಗಿತ್ತು. ಮೆದುಳಿನ ರಕ್ತಸ್ರಾವದ ಹಿನ್ನೆಲೆಯಲ್ಲಿ ಅವರನ್ನು ಗುರುಗ್ರಾಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪಾಂಡೆ ಅವರು 2002ರಿಂದ ಸರನ್ ಶಿಕ್ಷಕರ ಕ್ಷೇತ್ರದಿಂದ ಮೇಲ್ಮನೆಯನ್ನು ಪ್ರತಿನಿಧಿಸುತ್ತಿದ್ದರು.

- Advertisement -

ಪಾಂಡೆ ನಿಧನಕ್ಕೆ ರಾಜ್ಯಪಾಲ ಫಗು ಚೌಹಾಣ್, ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿ ತೇಜಸ್ವಿ ಹಾಗೂ ಇತರ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.



Join Whatsapp