ಕರ್ನಾಟಕ ಲೋಕಾಯುಕ್ತ ಹೈಕೋರ್ಟ್ ಪ್ರತಿನಿಧಿಯಾಗಿ ಹಿರಿಯ ನ್ಯಾಯವಾದಿ ಲತೀಫ್ ಬಡಗನ್ನೂರು ನೇಮಕ

Prasthutha|

ಪುತ್ತೂರು: ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯನ್ನು ಪ್ರತಿನಿಧಿಸುವ ವಿಶೇಷ ನ್ಯಾಯವಾದಿಯಾಗಿ ಹಿರಿಯ ನ್ಯಾಯವಾದಿ ಲತೀಫ್ ಅವರನ್ನು ನೇಮಿಸಿ ಕರ್ನಾಟಕ ಲೋಕಾಯುಕ್ತ ನಿಬಂಧಕರು ಆದೇಶ ಹೊರಡಿಸಿದ್ದಾರೆ.

- Advertisement -


ಪುತ್ತೂರಿನ ಮುಂಡೋಲೆ ನಿವಾಸಿಯಾಗಿರುವ ಲತೀಫ್ ಅವರು ಈ ಹಿಂದೆ ಹೈಕೋರ್ಟ್ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದರು.


ಕುಂಞ ಹಾಜಿ ಮತ್ತು ಖತೀಜ ದಂಪತಿಯ ಪುತ್ರನಾಗಿರುವ ಲತೀಫ್ ಬಡಗನ್ನೂರು ಅವರು ಕಳೆದ 18 ವರ್ಷಗಳಿಂದ ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಯಾಗಿರುವ ಇವರು ಪ್ರಸ್ತುತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕೆಎಸ್ ಆರ್ಟಿಸಿ ಕಾನೂನು ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಇವರು ಪುತ್ತೂರು ಪುರಸಭೆಯ ಕಾನೂನು ಸಲಹೆಗಾರರಾಗಿಯೂ ಹಲವು ವರ್ಷ ಕರ್ತವ್ಯ ನಿರ್ವಹಿಸಿದ್ದರು. ಇವರ ಪತ್ನಿ ಆಯಿಷಾ ಅವರೂ ಹೈಕೋರ್ಟ್ ವಕೀಲರಾಗಿದ್ದು ಲತೀಫ್-ಆಯಿಷಾ ದಂಪತಿಗೆ ಮೂವರು ಮಕ್ಕಳಿದ್ದು ಬೆಂಗಳೂರುನಲ್ಲಿಯೇ ವ್ಯಾಸಂಗ ಮಾಡುತ್ತಿದ್ದಾರೆ.



Join Whatsapp