ಕೋಮು ಸಂಘರ್ಷ ನಿರ್ಮೂಲನೆಗೆ ಪ್ರತ್ಯೇಕ ಹಣ ಮೀಸಲಿಡಿ: ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ಮನವಿ

Prasthutha|

ಮಂಗಳೂರು: ಕೋಮು ಸಂಘರ್ಷಣೆ ನಿರ್ಮೂಲನೆಗೆ ಪ್ರತ್ಯೇಕ ಹಣವನ್ನು ಮೀಸಲಿಡುವಂತೆ ಹಿರಿಯ ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

- Advertisement -

ಈ ಕುರಿತು ಸರ್ಕಾರಕ್ಕೆ ಮನವಿ ಮಾಡಿದ ಅವರು, ಕಳೆದ ಹಲವಾರು ವರುಷಗಳಿಂದ ಕರಾವಳಿ ಜಿಲ್ಲೆಗಳಲ್ಲಿ ನಿರಂತರ ಕೋಮು ಸಂಘರ್ಷಣೆಗಳು ನಡೆಯುತ್ತಾ ಬಂದಿದ್ದು, ರಾಜಕೀಯ ದುರುದ್ದೇಶ ಪೂರಿತವಾದ ಈ ಕೋಮು ದ್ವೇಷದ ಕ್ರಿಯಾಶಾಲಿ ಕೆಲಸ ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ ಧರ್ಮನುಯಾಯಿಗಳ ಮದ್ಯೆ ತಲ ತಲಾತರದಿಂದಲೂ ನಡೆದುಕೊಂಡು ಬಂದಿದ್ದ ಸಾಮರಸ್ಯವನ್ನು ಕದಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
ಈ ನಿರಂತರ ಸಂಘರ್ಷದಲ್ಲಿ ನಮ್ಮ ನಾಡಿನ ಮುಖ್ಯವಾದ ಮುಸ್ಲಿಂ ಮತ್ತು ಹಿಂದೂ ಜನಾಂಗದ ಯುವಕರು ಜೀವ ಕಳೆದುಕೊಂಡಿದ್ದಾರೆ. ಅದರಲ್ಲೂ ಹಿಂದೂಗಳಲ್ಲಿ ಜೀವ ಕಳೆದುಕೊಂಡವರು ಕಳಜಾತಿಯಲ್ಲಿ ಗುರುತಿಸಿಕೊಂಡವರು. ಕೋಮು ದ್ವೇಷದ ಈ ವಿಷ ಬೀಜ ಈಗ ನೇರವಾಗಿ ಶಿಕ್ಷಣ ಸಂಸ್ಥೆಗಳಿಗೆ ನುಗ್ಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸಾಮರಸ್ಯದಿಂದ, ಸಹೋದರತೆಯಿಂದ ಒಂದೇ ಬೆಂಚ್ ನಲ್ಲಿ, ಸರತಿ ಯಲ್ಲಿ, ಜೊತೆಯಾಗಿ ವಿದ್ಯೆಯನ್ನು ಗುರುಗಳಿಂದ ಆಸ್ವಾದಿಸ ಬೇಕಾಗಿದ್ದ ಮಕ್ಕಳು ಪರಸ್ಪರ ಧರ್ಮದ ಆಧಾರದಲ್ಲಿ ದ್ವೇಷಿಸುವ ಹಂತಕ್ಕೆ ತಲುಪಿದ್ದಾರೆ. ತನ್ನ ಸಹಪಾಠಿಯನ್ನು ಇನ್ನೊಂದು ಧರ್ಮಕ್ಕೆ ಸೇರಿದವನೆಂದು ಗುರುತಿಸಿ ದ್ವೇಷದ, ಪ್ರಚೋದಕ ಮಾತುಗಳನ್ನು ಆಡುತ್ತಿದ್ದಾರೆ. ಸರಕಾರವು ಈ ಕಲುಷಿತ ಮನಸ್ಸನ್ನು ತಿಳಿಗೊಳಿಸುವ ಕೆಲಸವನ್ನು ಮಾಡಬೇಕು ಎಂದು ಉಳೇಪಾಡಿ ಆಗ್ರಹಿಸಿದ್ದಾರೆ.

- Advertisement -

ಕರಾವಳಿಯಲ್ಲಿ ನಡೆಯುತ್ತಿರುವ ಕೋಮು ಸಂಘರ್ಷಗಳನ್ನು ನಿಲ್ಲಿಸಲು ನಿರಂತರ ಕಾರ್ಯಕ್ರಮಗಳನ್ನು ಹಾಕಿಕೊಂಡು, ಈ ಕಾರ್ಯಕ್ರಮ ನಡೆಸಲಿಕ್ಕಾಗಿ ಬಜೆಟ್ ನಲ್ಲಿ ಪ್ರತ್ಯೇಕ ಹಣವನ್ನು ಮೀಸಲಿಡಬೇಕೆಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.



Join Whatsapp