ಮಕ್ಕಳ ಅಶ್ಲೀಲ ವಿಡಿಯೋ ರವಾನೆ; ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್ ವಿರುದ್ಧ ಪ್ರಕರಣ ದಾಖಲು

Prasthutha|

ಬೆಂಗಳೂರು: ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್ ಒಬ್ಬರು ತಾವು ಕೆಲಸ ಮಾಡುವ ಕಾಲೇಜಿನ ಓರ್ವ ವಿದ್ಯಾರ್ಥಿಗೆ ಇನ್ಸ್ಟಾಗ್ರಾಮ್ ಮೂಲಕ ಮಕ್ಕಳ ಅಶ್ಲೀಲ ವಿಡಿಯೋ ರವಾನಿಸಿದ್ದು, ಚೈಲ್ಡ್ ಪೋರ್ನೊಗ್ರಫಿ ಕೇಸ್ ದಾಖಲಾಗಿದೆ.

- Advertisement -


ಆರೋಪಿಯನ್ನು ಮಧುಸೂದನ್ ಆಚಾರ್ಯ ಎಂದು ಗುರುತಿಸಲಾಗಿದೆ. ವೀಡಿಯೋವನ್ನು ಮಾನಿಟರ್ ಮಾಡಿರುವ National Center For Missing and Exploited Children ಪೋರ್ಟಲ್, ಈ ಮಾಹಿತಿಯನ್ನು ಎನ್ ಸಿಆರ್ ಬಿಗೆ ನೀಡಿದೆ. ನಂತರ ಎನ್ ಸಿಆರ್ ಬಿ ರಾಜ್ಯ ಸಿಐಡಿಗೆ ಸಿಡಿ ಸಹಿತ ಪ್ರಕರಣದ ಮಾಹಿತಿ ರವಾನೆ ಮಾಡಿದೆ.


ಇದರ ಜೊತೆಗೆ ಸೈಬರ್ ಕ್ರೈಮ್ ಟಿಪ್ ಲೈನ್ ಅಡಿಯಲ್ಲಿ ನೀಡಲಾದ ಮಾಹಿತಿ ಅನ್ವಯ ತಾಂತ್ರಿಕ ತನಿಖೆ ನಡೆಸಲಾಗಿದ್ದು, ಸಿಐಡಿ ಸೈಬರ್ ಕ್ರೈಮ್ ಪೊಲೀಸರು ವಿಚಾರಣೆ ನಡೆಸಿದಾಗ ಯಲಹಂಕ ಬಳಿಯ ಪ್ರತಿಷ್ಠಿತ ಕಾಲೇಜಿನ ಬಗ್ಗೆ ಮಾಹಿತಿ ಲಭ್ಯವಾಗಿದೆ.

- Advertisement -


ಐಪಿ ಅಡ್ರಸ್ ಸಹಿತ ಏರಿಯಾ ಪತ್ತೆ ಮಾಡಿದ ಪೊಲೀಸರು ಕಾರ್ಯಾಚರಣೆ ನಡೆಸಿ ಈಶಾನ್ಯ ವಿಭಾಗ ಸಿಇಎನ್ ಠಾಣೆಗೆ ನೀಡಿದ ದೂರಿನನ್ವಯ ಕೇಸ್ ದಾಖಲಿಸಿದ ಸಿಇಎನ್ ಪೊಲೀಸರು ಪ್ರೊಫೆಸರ್ ಮಧುಸೂದನ್ ಅವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.


ಮಕ್ಕಳ ಲೈಂಗಿಕ ವಿಡಿಯೋ ಕಳಿಸುವುದು, ನೋಡುವುದು ಹಾಗೂ ಸ್ಟೋರ್ ಮಾಡಿಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಪ್ರೊಫೆಸರ್ ತಮ್ಮ ವಿದ್ಯಾರ್ಥಿಗೆ ವಿಡಿಯೋ ಕಳಿಸಿ ಅವಾಂತರ ಸೃಷ್ಟಿಸಿಕೊಂಡಿದ್ದಾರೆ.



Join Whatsapp