ಕೋಲಾರ: ಕೆರೆ ಬಳಿ ಸೆಲ್ಫಿ ತೆಗೆದುಕೊಳ್ಳುವ ಸಾಹಸಕ್ಕೆ ಹೋಗಿ ಕೆರೆಗೆ ಬಿದ್ದ ಬಾಲಕಿ ಮತ್ತು ಮಗಳನ್ನು ರಕ್ಷಿಸಲು ನೋಡಿದ ತಂದೆ ಇಬ್ಬರೂ ಸಾವನ್ನಪ್ಪಿದ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ವೃಷಾಭಾವತಿ ಕೆರೆಯಲ್ಲಿ ಸಂಭವಿಸಿದೆ.
ಬೆಂಗಳೂರು ಮೂಲದ ಸೈಯದ್ ಅಯೂಬ್(35) ಫಾತಿಮಾ(10) ಮೃತಪಟ್ಟವರು . ಕೆರೆ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ ಸಂಭವಿಸಿದೆ.
ಗೊಲ್ಲಹಳ್ಳಿಗೆ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ತಂದೆ, ಮಗಳು ಕೆರೆ ನೋಡಲು ಹೋಗಿದ್ದಾರೆ. ಸೆಲ್ಫಿ ತೆಗೆದುಕೊಳ್ಳುವಅಗ ಮಗಳು ಫಾತಿಮಾ ಕೆರೆಗೆ ಬಿದ್ದಿದ್ದು, ರಕ್ಷಿಸಲು ಇಳಿದ ತಂದೆ ಆಯೂಬ್ ಕೂಡ ಸಾವನ್ನಪ್ಪಿದ್ದಾರೆ. ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.