ಸೆಲ್ಫೀ ಹುಚ್ಚು: ಮೀನಿನ ಬದಲಿಗೆ ಮೊಬೈಲನ್ನೇ ನದಿಗೆಸೆದ ಭೂಪ !

Prasthutha|

ಮೀನಿನೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಹೋಗಿ ವ್ಯಕ್ತಿಯೋರ್ವ ಮೀನಿನ ಬದಲಿಗೆ ಮೊಬೈಲನ್ನೇ ನದಿಗೆ ಎಸೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -


ದೋಣಿವಿಹಾರ ಮಾಡುತ್ತಾ ಮೀನನ್ನು ಹಿಡಿದಿದ್ದಾನೆ. ಹಿಡಿದ ಮೀನಿನೊಂದಿಗೆ ಸೆಲ್ಫೀ ತೆಗೆದುಕೊಳ್ಳಬೇಕೆಂಬ ಆಸೆ ಉಂಟಾಗಿದೆ. ಒಂದಿಷ್ಟು ಸೆಲ್ಫೀ ತೆಗೆದುಕೊಂಡು ಖುಷಿಪಟ್ಟಿದ್ದಾನೆ. ಕೊನೆಗೆ ಆ ಮೀನಿನ ಬದಲಾಗಿ ಮೊಬೈಲ್ ಅನ್ನೇ ನದಿಗೆಸೆದುಬಿಟ್ಟಿದ್ದಾನೆ. ಪಕ್ಕದಲ್ಲಿದ್ದ ದೋಣಿಯವರು ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಟ್ವಿಟರ್ ನಲ್ಲಿ ಪೋಸ್ಟ್ ಆದ ಈ ವಿಡಿಯೋ ಈಗ ನೆಟ್ಟಿಗರ ನಗುವಿಗೆ ಕಾರಣವಾಗಿದೆ.


ವಿಡಿಯೋವನ್ನು ತನ್ಸು ಯೆಗೆನ್ ಎಂಬುವವರು ಟ್ವೀಟ್ ಮಾಡಿದ್ದು, ಒಂದಿಷ್ಟು ಜನ ಇದು ನಕಲಿ ವಿಡಿಯೋ ಎಂದು ಹೇಳಿದ್ದಾರೆ.

Join Whatsapp