ಸಮಾಜ ಒಡೆದು ಹೋಗುವ ಸಂದರ್ಭದಲ್ಲಿ ಮಠಾಧೀಶರು ಜೋಡಿಸಬೇಕು: ಯು.ಟಿ ಖಾದರ್

Prasthutha|

ಉಡುಪಿ: ಧಾರ್ಮಿಕ ಕೇಂದ್ರಗಳಿಗೆ ಸಮಾಜವನ್ನು ತಿದ್ದುವ ಶಕ್ತಿಯಿದೆ. ಸಮಾಜ ಒಡೆದು ಹೋಗುವ ಸಂದರ್ಭದಲ್ಲಿ ಮಠಾಧೀಶರು ಜೋಡಿಸಬೇಕು ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.

- Advertisement -

ಉಡುಪಿ ಕೃಷ್ಣ ಮಠದ ಪುತ್ತಿಗೆ ಪರ್ಯಾಯ ದರ್ಬಾರ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ, ದೇಶದಲ್ಲಿ ಸಾಮರಸ್ಯ ಬೆಳೆಯಲು ಮಠಗಳು ದಾರಿದೀಪವಾಗಬೇಕು. ಹಿಂದಿನಿಂದಲೂ ನಾನು ಕೃಷ್ಣ ಮಠಕ್ಕೆ ಸಂಬಂಧಪಟ್ಟ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಮಠ ಕೇವಲ ಧಾರ್ಮಿಕವಾಗಿ ಕಾರ್ಯಾಚರಿಸದೆ, ಶೈಕ್ಷಣಿಕ, ಸಾಮಾಜಿಕವಾಗಿ ಕೂಡಾ ಕೆಲಸ ಮಾಡುತ್ತಿದೆ ಎಂದು ಹೇಳಿದರು.

Join Whatsapp