ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್ ಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶ

Prasthutha|

ಪಾಕಿಸ್ತಾನ ಮಹಿಳೆ ಸೀಮಾ ಹೈದರ್ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದರು. ಉತ್ತರ ಪ್ರದೇಶದ ವ್ಯಕ್ತಿ ಸಚಿನ್ ಮೀನಾ ಅವರನ್ನು ಹುಡುಕಿ ತಾವು ಬಂದಿರುವುದಾಗಿ ಅವರು ಹೇಳಿಕೊಂಡಿದ್ದರು. ಸದ್ಯ ಈ ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಬಾಲಿವುಡ್ ನಿರ್ಮಾಪಕರೊಬ್ಬರು ಅವರಿಗೆ ಸಿನಿಮಾ ಆಫರ್ ನೀಡಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

- Advertisement -


ತಾಯ್ನಾಡು ಪಾಕಿಸ್ತಾನವನ್ನು ತೊರೆದು ಭಾರತಕ್ಕೆ ಬಂದ ಸೀಮಾ ಅವರು ಸಚಿನ್ ಮತ್ತು 4 ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಅವರಿಗೆ ಜೀವನ ಅಷ್ಟು ಸುಲಭವಿಲ್ಲ. ಈ ಕಾರಣಕ್ಕೆ ಮೀರಠ್ ಮೂಲದ ಅಮಿತ್ ಜಾನಿ ಅವರು ಸೀಮಾಗೆ ಸಿನಿಮಾ ಆಫರ್ ನೀಡಿದ್ದಾರೆ. ಚಿತ್ರದಲ್ಲಿ ನಟಿಸಲು ಅವರಿಗೆ ಆಫರ್ ನೀಡಿರುವ ವಿಚಾರ ಚರ್ಚೆ ಆಗುತ್ತಿದೆ.


‘ಜಾನಿ ಫೈರ್ಫಾಕ್ಸ್ ಪ್ರೊಡಕ್ಷನ್ ಹೌಸ್’ ತಮ್ಮ ಮುಂಬರುವ ಚಿತ್ರ ‘ಎ ಟೈಲರ್ ಮರ್ಡರ್ ಸ್ಟೋರಿ’ಗಾಗಿ ಆಡಿಷನ್ ಗಾಗಿ ಸೀಮಾ ಹೈದರ್ ರನ್ನು ಭೇಟಿಯಾಗಿದೆ. ಈ ಚಿತ್ರದಲ್ಲಿ ಸೀಮಾ ಹೈದರ್ ಅವರು ರಾ ಏಜೆಂಟ್ ಆಗಿ ಬಣ್ಣ ಹಚ್ಚಲು ಚಿತ್ರತಂಡವು ಅವರನ್ನು ಸಂಪರ್ಕಿಸಿದೆ.

Join Whatsapp