ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ: ಬ್ಯಾರಿಕೇಡ್ ಹಾರಿ ಬಂದ ಯುವಕ

Prasthutha|

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಗೆ ಪ್ರಧಾನಿ ಮೋದಿ ಇಂದು ಆಗಮಿಸಿದ್ದು,  ರೋಡ್ ಶೋ ವೇಳೆ ಭದ್ರತಾ ಲೋಪ ಕಂಡು ಬಂದಿದೆ.

- Advertisement -

ಈ ಬಗ್ಗೆ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ವೀಡಿಯೋದಲ್ಲಿ ಯುವಕನೊಬ್ಬ ಬ್ಯಾರಿಕೇಡ್ ಹಾರಿ ಮೋದಿ ಕಾರಿನತ್ತ ನುಗ್ಗಿದ್ದಾನೆ. ಬಳಿಕ ಯುವಕ ಮೋದಿಗೆ ಹೂವಿನ ಹಾರ ಹಾಕಲು ಯತ್ನಿಸಿದ್ದಾನೆ. ಈ ವೇಳೆ, ಮೋದಿ ತಮ್ಮ ಕೈಯಿಂದ ಹೂವಿನ ಹಾರ ಸ್ವೀಕರಿಸಿದ್ದು, ಬಳಿಕ ಯುವಕನನ್ನು ಭದ್ರತಾ ಸಿಬ್ಬಂದಿ ಅಲ್ಲಿಂದ ದೂರ ಎಳೆದೊಯ್ದಿದ್ದಾರೆ.

- Advertisement -

ಇದು ಭದ್ರತಾ ವೈಫಲ್ಯ ಎಂದು ಪರಿಗಣಿಸಲಾಗಿದ್ದು, ತನಿಖೆ ನಡೆಯುವ ಸಾಧ್ಯತೆ ಇದೆ.



Join Whatsapp