ಕೋವಿಡ್ ಸೋಂಕಿತೆಯನ್ನು ಹಣಕ್ಕಾಗಿ ಆಸ್ಪತ್ರೆಯಲ್ಲೇ ಹತ್ಯೆಗೈದ ಭದ್ರತಾ ಸಿಬ್ಬಂದಿ!

Prasthutha|

ಚೆನ್ನೈ: ಕೋವಿಡ್ ಸೋಂಕಿತೆಯನ್ನು ಹಣಕ್ಕಾಗಿ ಭದ್ರತಾ ಸಿಬ್ಬಂದಿಯೊಬ್ಬಳು ಹತ್ಯೆಗೈದ ಘಟನೆ ಚೆನ್ನೈಯ ರಾಜೀವ್ ಗಾಂಧಿ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಭದ್ರತಾ ಸಿಬ್ಬಂದಿ 40 ವರ್ಷದ ರತಿದೇವಿಯನ್ನು ಬಂಧಿಸಲಾಗಿದೆ.

ಸೋಂಕಿತೆಯನ್ನು ಕೊಂದು ಹಣ ಮತ್ತು ಮೊಬೈಲ್ ಫೋನ್ ಗಳನ್ನು ದರೋಡೆ ಮಾಡಿ ಶವವನ್ನು ಆಸ್ಪತ್ರೆಯ ಎಂಟನೇ ಮಹಡಿಯಲ್ಲಿ ಬಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ವೆಸ್ಟ್ ತಾಂಬರಂ ಮೂಲದ ಸುನೀತಾ(41) ಹತ್ಯೆಗೀಡಾದವರು. ಕೋವಿಡ್ ಬಾಧಿತರಾಗಿ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುನೀತಾ ಅವರನ್ನು ಭೇಟಿ ಮಾಡಲು ಪತಿ ಮೌಲಿ ಆಸ್ಪತ್ರೆಗೆ ಬಂದಿದ್ದರೂ ವಾರ್ಡ್ ನಲ್ಲಿ ಪತ್ನಿ ಇರಲಿಲ್ಲ. ಈ ಬಗ್ಗೆ ಸೋಂಕಿತೆಯ ಪತಿ ಆಸ್ಪತ್ರೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ನಂತರ ಸೋಕಿತೆಯ ಪತಿ ಮೌಲಿ ಕೂಡ ಕೋವಿಡ್ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತಿ ಮೌಲಿ, ಸುನೀತಾ ಅವರ ಫೋನ್ ಗೆ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಮೌಲಿ ಪೊಲೀಸರಿಗೆ ದೂರು ನೀಡಿದ್ದರು.

ನಂತರ ಸುನೀತಾ ಅವರ ಶವ ಆಸ್ಪತ್ರೆಯ ಎಂಟನೇ ಮಹಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ನಡೆಸಿದ ಪೊಲೀಸರಿಗೆ ಈ ಕೃತ್ಯದ ಹಿಂದೆ ಭದ್ರತಾ ಸಿಬ್ಬಂದಿ ಇರುವುದು ದೃಢಪಟ್ಟಿದೆ.

ಸೋಂಕಿತೆ ಸುನೀತಾ ಅವರ ಪರ್ಸ್ ನಿಂದ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ರತಿ ದೇವಿ 9000 ರೂ.ಗಳನ್ನು ಕದಿಯಲು ಪ್ರಯತ್ನಿಸುತ್ತಿರುವುದನ್ನು ನೋಡಿದ ಸುನೀತಾ ಇದನ್ನು ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದ್ದರು. ಇದರಿಂದ ಭಯಭೀತಳಾದ ರತಿದೇವಿ ಆಮ್ಲಜನಕದ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಸುನೀತಾಳನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಎಂಟನೇ ಮಹಡಿಗೆ ಕರೆತಂದು ಕುತ್ತಿಗೆಗೆ ಪ್ಲಾಸ್ಟಿಕ್ ಹಗ್ಗದಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ನಂತರ ಶವವನ್ನು ವಿವಸ್ತ್ರವಾಗಿಸಿ ಎಂಟನೇ ಮಹಡಿಯಲ್ಲಿ ಬಿಟ್ಟು ಬಂದಿದ್ದಾಳೆ. ರತಿದೇವಿಯ ಬಳಿಯಿಂದ ಸುನೀತಾ ಅವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ.

Join Whatsapp