ಸಂಸತ್ತಿನಲ್ಲಿ ಭದ್ರತಾ ವೈಫಲ್ಯ; ಈ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ವಿಷಾದನೀಯ: ಓಂ ಬಿರ್ಲಾ

Prasthutha|

ದೆಹಲಿ: ಸಂಸತ್ತಿನ ಭದ್ರತಾ ಉಲ್ಲಂಘನೆಯ ಬಗ್ಗೆ ರಾಜಕೀಯ ಮಾಡುತ್ತಿರುವುದು ವಿಷಾದನೀಯ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.

- Advertisement -

ಪ್ರತಿಪಕ್ಷದ ಕೆಲ ಸಂಸದರು ತಮ್ಮ ಬೇಡಿಕೆಗಳಿರುವ ಫಲಕಗಳನ್ನು ಹಿಡಿದುಕೊಂಡಿದ್ದರು. ಸದನದೊಳಗೆ ಭಿತ್ತಿಪತ್ರಗಳನ್ನು ತರುತ್ತಿರುವುದನ್ನು ವಿರೋಧಿಸಿದ ಓಂ ಬಿರ್ಲಾ, ಇದು ಸದನದ ಘನತೆಯನ್ನು ಕುಗ್ಗಿಸುತ್ತದೆ ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ವಿಷಾದನೀಯ. ಸದನದ ಬಾವಿಗೆ ನುಗ್ಗಿ ಘೋಷಣೆ ಕೂಗುವುದು ಸದನದ ಘನತೆಗೆ ವಿರುದ್ಧವಾಗಿದೆ. ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲು ನಿಮ್ಮ (ವಿರೋಧ ಪಕ್ಷದ) ಸಹಕಾರವನ್ನು ಕೋರುತ್ತೇನೆ ಎಂದು ಬಿರ್ಲಾ ಹೇಳಿದರು.



Join Whatsapp