ಭದ್ರತಾ ಲೋಪ : ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನೆಗೆ ನುಗ್ಗಿ ಬೆಳಗ್ಗಿನವರೆಗೂ ತಂಗಿದ ಆಗಂತುಕ

Prasthutha|

- Advertisement -

ಕೋಲ್ಕತ್ತ: ಕಾಳಿಘಾಟ್ ಪ್ರದೇಶದಲ್ಲಿನ ಹರೀಶ್ ಚಟರ್ಜಿ ರಸ್ತೆಯಲ್ಲಿರುವ ಮಮತಾ ಬ್ಯಾನರ್ಜಿ ಅವರ ಮನೆಗೆ ಭಾನುವಾರ ನಸುಕಿನ ಜಾವ 1 ಗಂಟೆಗೆ ಗೋಡೆ ಹಾರಿ ವ್ಯಕ್ತಿಯೊಬ್ಬ ಒಳನುಗ್ಗಿದ್ದು, ಬೆಳಗ್ಗಿನವರೆಗೂ ಅಲ್ಲೇ ತಂಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

- Advertisement -

‘ಝೆಡ್ ಪ್ಲಸ್’ ಭದ್ರತೆಯಿರುವ ಸಿಎಂ ನಿವಾಸಕ್ಕೆ ವ್ಯಕ್ತಿ ಅಕ್ರಮವಾಗಿ ಪ್ರವೇಶಿಸಿರುವುದು ಮತ್ತು ಅಲ್ಲಿಯೇ ಯಾರ ಗಮನಕ್ಕೂ ಬಾರದಂತೆ ಸಮಯ ಕಳೆದಿರುವುದು ಭದ್ರತಾ ಲೋಪವಾಗಿದ್ದು, ಆತಂಕ ಮೂಡಿಸಿದೆ.

ಸಿಎಂ ಮನೆಗೆ ನುಗ್ಗಿದ್ದ ವ್ಯಕ್ತಿ, ಬೆಳಗಾಗುವವರೆಗೂ ಅಲ್ಲೇ ಕುಳಿತುಕೊಂಡಿದ್ದ. ನಂತರವಷ್ಟೇ ಭದ್ರತಾ ಸಿಬ್ಬಂದಿ ಆತನನ್ನು ಗಮನಿಸಿದ್ದು ನಂತರ ಬಂಧಿಸಿ ಬಳಿಕ ಕಾಳಿಘಾಟ್ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.

ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪ್ರಕರಣದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಆತ ಮಾನಸಿಕ ಅಸ್ವಸ್ಥನಂತೆ ಕಾಣಿಸುತ್ತಿದ್ದಾನೆ ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ. ಭದ್ರತಾ ಲೋಪ ಬೆಳಕಿಗೆ ಬರುತ್ತಿದ್ದಂತೆ ಸಿಎಂ ಮಮತಾ ಮನೆಗೆ ಹೆಚ್ಚುವರಿ ಭದ್ರತೆ ಬಿಗಿಗೊಳಿಸಲಾಗಿದೆ.

Join Whatsapp