ಮಹಾರಾಷ್ಟ್ರದಲ್ಲಿ ವ್ಯಾಪಿಸಿದ ಒಮಿಕ್ರಾನ್ | ಇಂದು , ನಾಳೆ ಮುಂಬೈನಲ್ಲಿ 144 ಸೆಕ್ಷನ್ ಜಾರಿ !

Prasthutha|

ಮುಂಬೈ: ಮಹಾರಾಷ್ಟ್ರದಲ್ಲಿ ನಿನ್ನೆ ಮತ್ತೆ ಏಳು ಹೊಸ ಒಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಒಟ್ಟು 17ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಇಂದು ಮತ್ತು ನಾಳೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ಮುಂಬೈನಲ್ಲಿ ಮೆರವಣಿಗೆಗಳು ಮತ್ತಿತರ ರೀತಿಯ ಎಲ್ಲಾ ಸಮಾರಮಭಗಳಿಗೆ ನಿರ್ಬಂಧ ವಿಧಿಸಲಾಗಿದ್ದು, , ಒಮಿಕ್ರಾನ್ ಇನ್ನಷ್ಟು ವ್ಯಾಪಿಸುವದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

- Advertisement -

ಇದೀಗ ಮೂರು ವರ್ಷದ ಮಗುವಲ್ಲೂ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ. ಶುಕ್ರವಾರ ಪತ್ತೆಯಾದ ಏಳು ಕೋವಿಡ್ ಕೇಸ್ಗಳಲ್ಲಿ ಮೂರು ಪ್ರಕರಣಗಳು ಮುಂಬೈನಿಂದ ಮತ್ತು ನಾಲ್ಕು ಕೇಸ್ಗಳು ಪಿಂಪ್ರಿಯ ಚಿಂಚವಾಡ ಮುನ್ಸಿಪಲ್ ಕಾರ್ಪೋರೇಶನ್ನಿಂದ ವರದಿಯಾಗಿದೆ. ಸೋಂಕಿಗೆ ತುತ್ತಾದವರು ಪುರುಷರೇ ಆಗಿದ್ದು, ಸೋಂಕಿತರು ತಾಂಜೇನಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸಾಗಿದ್ದರು.

ಮಹಾರಾಷ್ಟ್ರ ಹೊರತು ಪಡಿಸಿದರೆ ರಾಜಸ್ಥಾನದಲ್ಲಿ 9, ಗುಜರಾತ್ನಲ್ಲಿ 3, ಕರ್ನಾಟಕದಲ್ಲಿ 2 ಮತ್ತು ದೆಹಲಿಯಲ್ಲಿ ಒಂದು ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ.

Join Whatsapp