ಅರುಣಾಚಲದಲ್ಲಿ ಚೈನಾ ನಗರಗಳ ನಿರ್ಮಾಣ: ನೂತನ ಉಪಗ್ರಹ ಚಿತ್ರದಲ್ಲಿ ಆಘಾತಕಾರಿ ಅಂಶ ಬಹಿರಂಗ

Prasthutha|

ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಚೈನಾ, ತನ್ನ ರಾಷ್ಟ್ರವನ್ನು ಗಡಿಯಾಚೆಗೂ ವೃದ್ಧಿಸುವ ಭಾಗವಾಗಿ ಕನಿಷ್ಠ 60 ಕಟ್ಟಡಗಳನ್ನು ನಿರ್ಮಿಸಿರುವುದು ನೂತನ ಉಪಗ್ರಹ ಚಿತ್ರದಲ್ಲಿ ಬಹಿರಂಗವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಮಾತ್ರವಲ್ಲ ಗಡಿ ಪ್ರದೇಶಗಳಲ್ಲಿ ಚೈನಾ, ತನ್ನದೇ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿರುವುದನ್ನು ಮುಂದುವರಿಸಿರುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಅರುಣಾಚಲ ಪ್ರದೇಶದಲ್ಲಿ ನಾಲ್ಕು ಗ್ರಾಮಗಳನ್ನೇ ನಿರ್ಮಿಸಿರುವುದನ್ನು ಉಪಗ್ರಹ ಚಿತ್ರಗಳು ಸಾಕ್ಷಿಯಾಗಿಸಿದೆ. ಈ ಬೆಳವಣಿಗೆಯು ಭಾರತಕ್ಕೆ ಹೊಸ ತಲೆನೋವು ತಂದಿಟ್ಟಿದೆ.

ಚೈನಾ ವು ಅರುಣಾಚಲ ಪ್ರದೇಶದಲ್ಲಿ 100 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹಲವಾರು ಹೊಸ ಹಳ್ಳಿಗಳು ಹರಡಿಕೊಂಡಿವೆ. ಡೋಕ್ಲಾಂ ಪ್ರಸ್ಥಭೂಮಿಯ ಸಮೀಪದಲ್ಲಿರುವ ಈ ವಿವಾದಿತ ಭೂಮಿಯು 2017ರಲ್ಲಿ ಭಾರತ ಮತ್ತು ಚೈನಾ ಸೇನೆಗಳು ಮುಖಾಮುಖಿಯಾದ ಸ್ಥಳವಾಗಿದೆ.

- Advertisement -

ಅರುಣಾಚಲ ಪ್ರದೇಶದಲ್ಲಿ ಚೈನಾ ಸೇನಾ ಪಡೆಗಳು ನಾಲ್ಕು ಗ್ರಾಮಗಳನ್ನು ನಿರ್ಮಿಸಿದ್ದು 2020ರ ಮೇ ತಿಂಗಳಿನಿಂದ 2021ರ ನವೆಂಬರ್ ತಿಂಗಳ ಅವಧಿಯಲ್ಲಾಗಿದೆ. ಚೀನಾದ ಸರ್ಕಾರಿ ಮಾಧ್ಯಮದೊಂದಿಗೆ ಹಿರಿಯ ಪತ್ರಕರ್ತರೊಬ್ಬರು ಪೋಸ್ಟ್ ಮಾಡಿದ ಉಪಗ್ರಹದ ಚಿತ್ರಗಳಿಂದ ಈ ಗ್ರಾಮವು 2 ಕಿಲೋಮೀಟರ್ ಅರುಣಾಚಲ ಪ್ರದೇಶದೊಳಗೆ, ಡೋಕ್ಲಾಮ್ ಗೆ ಬಹಳ ಹತ್ತಿರದಲ್ಲಿದೆ ಎಂಬುದನ್ನು ತೋರಿಸುತ್ತಿವೆ.

ವಿವಾದಿತ ಗಡಿ ಪ್ರದೇಶಗಳಲ್ಲಿ ಚೈನಾ ಈ ರೀತಿಯಾಗಿ ಅತಿಕ್ರಮಣ ಮಾಡಿ ಗ್ರಾಮಗಳನ್ನೇ ನಿರ್ಮಿಸಲು ಧೈರ್ಯ ತೋರಿಸುತ್ತಿರುವುದು ಭಾರತದ ಸಾಮರ್ಥಕ್ಕೆ ಎದುರಾದ ದೊಡ್ಡ ಸವಾಲಾಗಿದೆ.



Join Whatsapp