ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸದಂತೆ ಅನಿಲ್ ಅಂಬಾನಿಗೆ ನಿರ್ಬಂಧ ವಿಧಿಸಿದ ಸೆಬಿ

Prasthutha|

 ನವದೆಹಲಿ: ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (RHFL) ನಿಂದ ಇತರ ಕಂಪನಿಗಳಿಗೆ ಅಕ್ರಮವಾಗಿ ಹಣ ವರ್ಗಾಯಿಸುವುದನ್ನು ತಡೆಯುವ ಉದ್ದೇಶದಿಂದ ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸದಂತೆ ಉದ್ಯಮಿ ಅನಿಲ್ ಅಂಬಾನಿಗೆ ಭಾರತೀಯ ಷೇರು ವಿನಿಮಯ ಮಂಡಳಿ ಸೆಬಿ ನಿರ್ಬಂಧ ವಿಧಿಸಿದೆ.

- Advertisement -

ಆರ್ಥಿಕವಾಗಿ ದುರ್ಬಲವಾದ ಪ್ರವರ್ತಕ ಗುಂಪಿನ ಕಂಪನಿಗಳೊಂದಿಗೆ ಅಕ್ರಮವಾಗಿ ಹಣದ ವ್ಯವಹಾರ ನಡೆಸುವಲ್ಲಿ ಆರ್ಎಚ್ ಎಫ್ ಎಲ್ ನ ಆಯಾಕಟ್ಟಿನ ಹುದ್ದೆಗಳಲ್ಲಿರುವವರು ಅನಿಲ್ ಅಂಬಾನಿ ಅವರೊಂದಿಗೆ ಕೈಜೋಡಿಸಿದ್ದಾರೆ ಎಂದು ಮಾರುಕಟ್ಟೆ ನಿಯಂತ್ರಕ ಸೆಬಿ ಪತ್ತೆ ಮಾಡಿದೆ. ಮುಂದಿನ ಆದೇಶದವರೆಗೆ ಸೆಬಿಯಲ್ಲಿ ನೋಂದಾಯಿತ ಯಾವುದೇ ದಲ್ಲಾಳಿಗಳೊಂದಿಗೆ ಹಾಗೂ ಪಟ್ಟಿ ಮಾಡಲಾದ ಸಾರ್ವಜನಿಕ ಕಂಪನಿಯೊಂದಿಗೆ ಕಾರ್ಯನಿರ್ವಹಿಸುವುದನ್ನು ಮತ್ತು ಸಾರ್ವಜನಿಕ ಕಂಪನಿಯೊಂದಿಗೆ ನಿರ್ದೇಶಕರು/ಪ್ರವರ್ತಕರಾಗಿ ಕೆಲಸ ಮಾಡದಂತೆಯೂ , ಅಂಬಾನಿ ಮತ್ತಿತರಿಗೆ ಅದು ನಿರ್ಬಂಧಿಸಿದೆ. ಅನಿಲ್ ಅವರಿಗೆ ಸಂಬಂಧಿಸಿದಂತೆಯೂ ಸೆಬಿ ನಿರ್ದಿಷ್ಟ ಆಪಾದನೆಗಳನ್ನು ಮಾಡಿದೆ.

ಆರ್ ಎಚ್ ಎಫ್ ಎಲ್ ನ ಪ್ರವರ್ತಕರು ಮತ್ತು ವ್ಯವಸ್ಥಾಪಕರು ಆರ್ಥಿಕವಾಗಿ ದುರ್ಬಲವಾದ ಪ್ರವರ್ತಕ ಗುಂಪಿನ ಕಂಪನಿಗಳೊಂದಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆಲ ದೂರುಗಳು ಬಂದ ಹಿನ್ನೆಲೆಯಲ್ಲಿ ಸೆಬಿ ಈ ಕ್ರಮ ಕೈಗೊಂಡಿದೆ. ಅಲ್ಲದೆ ವಿವಿಧ ಸಾಲದಾತರಿಂದ ಆರ್ ಎಚ್ ಎಫ್ ಎಲ್ ಎರವಲು ಪಡೆದ ಹಣದಲ್ಲಿ ಭಾಗಶಃ ಮಾತ್ರ ಮರುಪಾವತಿಯಾಗಿದೆ ಎಂದು ಬ್ಯಾಂಕ್ಗಳಿಂದಲೂ ಸೆಬಿ ದೂರು ಸ್ವೀಕರಿಸಿತ್ತು.



Join Whatsapp