ಮಂಗಳೂರು: ಬಂದರು ಮತ್ತು ಮೀನುಗಾರಿಕೆ ಹಾಗೂ ಒಳ ಜಲಸಾರಿಗೆ ಮಂತ್ರಿ ಅಂಗಾರ ಅವರು ಶುಕ್ರವಾರ ಮಂಗಳೂರಿನಲ್ಲಿ ಕಡಲ ನೀರನ್ನು ಕುಡಿವ ನೀರಾಗಿಸುವ ಪ್ರಾತ್ಯಕ್ಷಿಕೆಗೆ ಚಾಲನೆಯನ್ನು ನೀಡಿದರು.
ಪತ್ರಕರ್ತರನ್ನು ಒಳಗೊಂಡ ಬೋಟು ಹಳೆಯ ಬಂದರಿನಿಂದ ಹೊರಟು ಪಲ್ಗುಣಿ ನದಿಯು ನೇತ್ರಾವತಿಯನ್ನು ಸೇರುವ ಅಳಿವೆ ಬಾಗಿಲಿಗೆ ಹೋಯಿತು. ನಡುವೆ ವಿದೇಶದಿಂದ ತರಿಸಿದ ಯಂತ್ರದಿಂದ ಉಪ್ಪು ನೀರನ್ನು ಸಿಹಿಯಾಗಿಸುವ ಪ್ರಾತ್ಯಕ್ಷಿಕೆ ನಡೆಯಿತು. ಸಚಿವ ಅಂಗಾರ ಚಾಲನೆ ನೀಡಿದರು.
ಹಿರಿಯ ನಾಯಕ ರಾಮಚಂದ್ರ ಬೈಕಂಪಾಡಿ ಅವರು ನೀರು ಸಿಹಿಯಾಗುವ ಯಂತ್ರದ ಬಗೆಗೆ ಮಾಹಿತಿ ನೀಡಿದರು. 160 ದೇಶಗಳಲ್ಲಿ ಈಗಾಗಲೇ ಈ ನೀರು ಬಳಕೆಯಲ್ಲಿ ಇರುವ ಬಗೆಗೆ ಮಾಹಿತಿ ನೀಡಿದರು.