SDTU ರಾಜ್ಯ ಕಾರ್ಯಕಾರಿಣಿ ಸಭೆ: ಜನಪರ ನಿರ್ಣಯಗಳ ಅಂಗೀಕಾರ

Prasthutha|

ಬೆಂಗಳೂರು: ಬೆಂಗಳೂರಿನ ಕಚೇರಿಯಲ್ಲಿ SDTU ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆ ನಡೆದಿದ್ದು, ರಾಜ್ಯಾಧ್ಯಕ್ಷ ಫಝಲುಲ್ಲಾ ರವರ ಅಧ್ಯಕ್ಷತೆ ವಹಿಸಿದ್ದರು. ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಫಾರೂಕು ತಮಿಳ್ ನಾಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಜನಪರವಾಗಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

- Advertisement -

ಸಭೆಯಲ್ಲಿ ಕೈಗೊಂಡ ನಿರ್ಣಯಗಳು:

  1. ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಮಂಡಳಿಯಿಂದ ಲಭ್ಯವಿರುವ ಯೋಜನೆಗನ್ನು ಸಮರ್ಪಕವಾಗಿ ಅನುಷ್ಠಾನವಾಗುವಂತೆ ಸರಕಾರ ಕಾರ್ಯಕ್ರಮಗಳನ್ನು ನಡೆಸಬೇಕು
  2. ಸೂಕ್ತ ಸುರಕ್ಷಾ ಕ್ರಮ, ಭದ್ರತೆ ಇಲ್ಲದೆ ದುಡಿಯುವ ಎಲ್ಲಾ ಕಾರ್ಮಿಕರ ಹಿತದ್ರಷ್ಠಿಯಿಂದ ಸುರಕ್ಷಾ ಕ್ರಮ ಕೈಗೊಳ್ಳಲು ಅಧಿಕೃತರಿಗೆ ಸರಕಾರ ಆದೇಶ ನೀಡಬೇಕು.
  3. ಆಟೋ LPG (ಇಂಧನ) ಇತ್ಯಾದಿ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಗೆ ಸರಕಾರ ಕಡಿವಾಣ ಹಾಕಬೇಕು.
  4. ಸರಕು ಸಾಗಾಟದ ಲಾರಿ ಚಾಲಕರಿಗೆ ಹೊರರಾಜ್ಯದಲ್ಲಿ ನಡೆಯುವ ಸುಲಿಗೆ ಇತ್ಯಾದಿ ದೌರ್ಜನ್ಯಗಳನ್ನು ತಡೆಯಲು ಸರಕಾರ ವಿಶೇಷ ಕ್ರಮಕೈಗೊಳ್ಳಬೇಕು
  5. ಸುರಕ್ಷತಾ ಮಾನದಂಡ ಇಲ್ಲದ ಮತ್ತು ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿ ವೈಟ್ ಬೋರ್ಡ್ ದ್ವಿಚಕ್ರ ವಾಹನಗಳಿಂದ ಆ್ಯಪ್‌ ಆಧಾರಿತ ರೇಪಿಡೋ ಟ್ಯಾಕ್ಸಿ ಸೇವೆಯನ್ನು ಸರಕಾರ ರದ್ದುಗೊಳಿಸಬೇಕು.

ಉಪಾಧ್ಯಕ್ಷ ಅಲ್ತಾಫ್ ಬೆಂಗಳೂರು, ಕೋಶಾಧಿಕಾರಿ ಉಬೈದ್ ಶೆರೀಫ್, ಸದಸ್ಯೆರಾದ ಫರ್ಜಾನ ಸನಾವುಳ್ಳ ಹಾಗೂ ಎಲ್ಲಾ ಜಿಲ್ಲೆಯ ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಝಾಕೀರ್ ಹುಸೇನ್ ಸ್ವಾಗತಿಸಿದರೆ, ರಾಜ್ಯ ಕಾರ್ಯದರ್ಶಿ ಖಾದರ್ ಫರಂಗಿಪೇಟೆ ಧನ್ಯವಾದಗೈದರು




Join Whatsapp