SDTU ರಾಜ್ಯ ಕಾರ್ಯಕಾರಿಣಿ ಸಭೆ

Prasthutha|

- Advertisement -

ಬೆಂಗಳೂರು: ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ರಾಜ್ಯ ಕಾರ್ಯಕಾರಿಣಿ ಸಭೆ ರಾಜ್ಯಾಧ್ಯಕ್ಷ ಫಝಲುಲ್ಲಾ ರವರ ಅಧ್ಯಕ್ಷತೆಯಲ್ಲಿ ಇಂಡಿಯನ್ ಸೋಶಿಯಲ್ ಇನ್ಸಿಟ್ಯೂಟ್ ಬೆಂಗಳೂರಿನಲ್ಲಿ ಶನಿವಾರ ನಡೆಯಿತು.

ವಿಶೇಷ ಆಹ್ವಾನಿತರಾಗಿ SDTU ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಫಾರೂಕು ತಮಿಳ್ ನಾಡು ಭಾಗವಹಿಸಿದರು.
ಕಾರ್ಯದರ್ಶಿ ಶೆರೀಫ್ ಪಾಂಡೇಶ್ವರ್, ಕೋಶಾಧಿಕಾರಿ ಖಾದರ್ ಫರಂಗಿಪೇಟೆ, ಸದಸ್ಯರಾದ ಅಬ್ದುಲ್ ರಹೀಮ್ ಪಟೇಲ್ ಹಾಗೂ ಜಿಲ್ಲೆಯ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಉಪಸ್ಥಿತಿಯಲ್ಲಿ ನಡೆಯಿತು.

- Advertisement -

SDTU ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ನಿರ್ಣಯಗಳು: ಬೀದಿ ಬದಿ ವ್ಯಾಪಾರಿಗಳ ಹಿತದೃಷ್ಟಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಸ್ಥಳೀಯ ಸಂಸ್ಥೆಯ ಆಡಳಿತ ಮುಖ್ಯಸ್ಥರು, ಉನ್ನತ ಅಧಿಕಾರಿಗಳು, ಬೀದಿ ಬದಿ ವ್ಯಾಪಾರಿಗಳ ಮುಖಂಡರನ್ನೊಳಗೊಂಡ ಸಮಿತಿಯನ್ನು ರಚಿಸಬೇಕು.

ಈ ಸಮಿತಿಯಲ್ಲಿ ಚರ್ಚಿಸಿ ಕಾಲಕ್ಕನುಗುಣವಾಗಿ ಬೀದಿ ಬದಿ ವ್ಯಾಪಾರಿಗಳ ತೆರವು ಮತ್ತು ಪರ್ಯಾಯ ವ್ಯವಸ್ಥೆಗೊಳಿಸಬೇಕು ಹಾಗೂ ಗುರುತಿನ ಚೀಟಿ ನೀಡಿ ಕಾನೂನು ಬದ್ದಗೊಳಿಸಬೇಕೆಂಬ ಆದೇಶ ಇರುವಾಗ ಮಹಾ ನಗರ, ನಗರ, ಪುರಸಭೆ, ಪಟ್ಟಣ ಇತ್ಯಾದಿಗಳಲ್ಲಿ ವಿವಿಧ ಕಡೆ ಸಮಿತಿಯೇ ರಚನೆಯಾಗಿಲ್ಲ ಮಾತ್ರವಲ್ಲ ಸಮಿತಿ ಅಸ್ತಿತ್ವದಲ್ಲಿದ್ದರೂ ನಿಗದಿತ ಸಮಯದಲ್ಲಿ ಆಂತರಿಕ ಚುನಾವಣೆಯೂ ನಡೆಯುವುದಿಲ್ಲ ಎಂಬ ಆರೋಪ ಕೇಳಿ ಬರುವಾಗ ರಾಜ್ಯಾದ್ಯಂತ ಬೀದಿ ಬದಿ ವ್ಯಾಪಾರಿಗಳ ಹಿತದೃಷ್ಟಿಯಿಂದ ಸಮಿತಿ ರಚಿಸಿ ಅವರ ಬದುಕುವ ಹಕ್ಕಿಗೆ ತೊಡಕಾಗದಂತೆ ಅಧಿಕೃತರು ಕ್ರಮಕೈಗೊಳ್ಳಬೇಕು.


ಮೋಟಾರ್ ವಾಹನ ನೂತನ ಕಾಯ್ದೆ ಅಡಿಯಲ್ಲಿ ಇನ್ಸೂರೆನ್ಸ್ ಫಿಟ್ನೆಸ್ ಪ್ರಮಾಣ ಪತ್ರಕ್ಕೆ ನಿಗದಿಪಡಿಸಿದ ದರ ಕಡಿತಗೋಳಿಸಬೇಕು ಮತ್ತು ಹದಿನೈದು ವರ್ಷಕ್ಕಿಂತ ಹಳೆಯದಾದ ವಾಹನದ ಕಾನೂನು ಬದ್ದ ಸಂಚಾರಕ್ಕೆ ನಿರ್ಬಂಧಗೊಳಿಸಿದ್ದನ್ನು ಮರುಪರಿಶೀಲನೆಗೊಳಿಸಬೇಕು.


ಅಲ್ಪಸಂಖ್ಯಾತ ಕಾರ್ಮಿಕರ ಮಕ್ಕಳೇ ಹೆಚ್ಚು ಫಲಾನುಭವಿಯಾದ ಫ್ರಿಮೆಟ್ರಿಕ್ ಸ್ಕಾಲರ್ ಶಿಪ್ ರದ್ದುಗೊಳಿಸಿದ್ದನ್ನು ಸರ್ಕಾರ ಪುನರಾರಂಭಗೊಳಿಸಬೇಕು.


ಆಟೋ ಚಾಲಕರಿಗೆ ಪ್ರತ್ಯೇಕ ಕ್ಷೇಮಭಿವೃದ್ಧಿ ನಿಗಮಗಳನ್ನು ಸ್ಥಾಪಿಸಬೇಕು ಎಂಬ ಬೇಡಿಕೆಯ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು



Join Whatsapp