ಮಂಗಳೂರು: ಸುರತ್ಕಲ್ ಜಲೀಲ್ ಹತ್ಯೆ ಮತ್ತು ಈ ಹಿಂದೆ ಅನೈತಿಕ ಗುಂಡಾಗಿರಿ ನಡೆಸಿ ಕಾರ್ಮಿಕರಿಬ್ಬರನ್ನು ಥಳಿಸಿ ಜಿಲ್ಲೆಯನ್ನು ಪ್ರಕ್ಷುಬ್ದಗೊಳಿಸಲು ಪ್ರಯತ್ನಿಸಿದ ಘಟನೆಗೆ ಸಂಬಂಧಿಸಿ ಸರ್ಕಾರದ ತಾರತಮ್ಯ ಧೋರಣೆಯನ್ನು ಖಂಡಿಸಿ ಇಂದು ನಡೆಸುವ ಪ್ರತಿಭಟನೆಗೆ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ದ.ಕ ಜಿಲ್ಲಾ ಸಮಿತಿ ಬೆಂಬಲ ವ್ಯಕ್ತಪಡಿಸಿದೆ.
ಮಂಗಳವಾರ 3 ಗಂಟೆಗೆ ಮಂಗಳೂರಿನ ಕ್ಲಾಕ್ ಟವರ್ ಎದುರು SSF, SYS ಹಮ್ಮಿಕೊಂಡ ಹಕ್ಕೊತ್ತಾಯ ಸಭೆಗೆ ಕಾರ್ಮಿಕ ಸಂಘಟನೆಯಾದ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಕಾನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.