ಚಿಕ್ಕಮಗಳೂರಿನಲ್ಲಿ ದಲಿತ ಕೂಲಿ ಕಾರ್ಮಿಕ ಮಹಿಳೆಯ ಹತ್ಯೆ ನಡೆಸಿ ಸುಟ್ಟು ಹಾಕಿದ ದುಷ್ಕರ್ಮಿಗಳು : SDTU ಖಂಡನೆ, ಕಠಿಣ ಕ್ರಮಕ್ಕೆ ಆಗ್ರಹ

Prasthutha|

ಚಿಕ್ಕಮಗಳೂರು: ಸಿದ್ಧಾಪುರ ಗ್ರಾಮದಲ್ಲಿ ಜಯಮ್ಮ (54) ಎಂಬ ದಲಿತ ಕಾರ್ಮಿಕ ಮಹಿಳೆಗೆ ಗುಂಡಿಕ್ಕಿ ಹತ್ಯೆ ನಡೆಸಿ ಕಾಫಿ ಎಸ್ಟೇಟ್ ನಲ್ಲಿ ಸುಟ್ಟು  ಹಾಕಿದ 7 ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದ್ದು ಈ ದುಷ್ಕ್ರತ್ಯವನ್ನು ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ರಾಜ್ಯ ಪ್ರಧಾನ ಕಾರ್ಯದರ್ಶಿ ಝಕೀರ್ ಹುಸೈನ್ ಖಂಡಿಸಿದ್ದಾರೆ

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು ದೇಶದಾದ್ಯಂತ ಜನಾಂಗೀಯ ದ್ವೇಷದಲ್ಲಿ ನಡೆಯುವ ವಿವಿಧ ಹತ್ಯೆ, ಹಲ್ಲೆ, ಇತ್ಯಾದಿ ಪ್ರಕರಣಗಳಿಗೆ ತಾರ್ಕಿಕ ಅಂತ್ಯಗೊಳಿಸಲು ಸ್ವತಂತ್ರ ಭಾರತದ ಶ್ರೇಷ್ಠ ಸಂವಿಧಾನ ಇರುವ ಪ್ರಭುತ್ವಕ್ಕೆ ಸಾಧ್ಯವಿಲ್ಲಎಂದಾದರೆ ನಮ್ಮ ದೇಶ ಯಾವ ರೀತಿ ಅಭಿವೃದ್ಧಿಯಾದರೂ ಏನು ಪ್ರಯೋಜನ ಎಂದು ವ್ಯವಸ್ಥೆಯನ್ನು ಅವರು ಪ್ರಶ್ನಿಸಿದ್ದಾರೆ

ಈ ಕಾರ್ಮಿಕ ಮಹಿಳೆಯ ಹತ್ಯೆ ಜನಾಂಗೀಯ ದ್ವೇಷದಿಂದಲೋ, ಅಥವಾ ಅತ್ಯಾಚಾರ ನಡೆಸಿ ಹತ್ಯೆ ನಡೆಸಲಾಗಿದೆಯೋ, ಅಥವಾ ವ್ಯಯಕ್ತಿಕ ಕಾರಣಕ್ಕಾಗಿ ಹತ್ಯೆ ನಡೆದಿದೆಯೋ ಎಂದು ತನಿಖೆಯಿಂದ ಬಹಿರಂಗವಾಗಬೇಕಿದೆ

- Advertisement -

ಪೊಲೀಸ್ ಇಲಾಖೆ ಈ ಘೋರ ದುಷ್ಕ್ರತ್ಯವನ್ನು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು SDTU ರಾಜ್ಯ ಪ್ರಧಾನ ಕಾರ್ಯದರ್ಶಿ ಝಕೀರ್ ಹುಸೈನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ



Join Whatsapp