ಆಟೋ ಗ್ಯಾಸ್ ವಿತರಣೆಯಲ್ಲಿ ಸುಲಿಗೆ| ಜಿಲ್ಲಾಧಿಕಾರಿಗೆ SDTU ದೂರು

Prasthutha|

ಮಂಗಳೂರು: ಆಟೋ ಗ್ಯಾಸ್ ದರ ಪರಿಷ್ಕರಣೆಯಾದರೂ ಹಿಂದಿನ ದರದಲ್ಲಿ ಗ್ಯಾಸ್ ವಿತರಿಸಿ ಸುಲಿಗೆ ನಡೆಸಿದ ಆಟೋ ಗ್ಯಾಸ್ ವಿತರಕರ ವಿರುದ್ಧ SDTU ಜಿಲ್ಲಾ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ದೂರು ನೀಡಿತು.

- Advertisement -

ಏಪ್ರಿಲ್ 18 ರಂದು ನಗರದ ಬಲ್ಮಟದಲ್ಲಿರುವ ಆಟೋ ಗ್ಯಾಸ್ ಪಂಪ್ ನಲ್ಲಿ ಲೀಟರ್ ಗೆ 54.26 ರೂಪಾಯಿಯಾದರೆ ಸುರತ್ಕಲ್, ಕಾನ, ಕುಳಾಯಿ, ಪಡೀಲ್, ಬಂಟ್ವಾಳದ ತಲಪಾಡಿ, ಬಿಸಿರೋಡ್ ಇನ್ನಿತರ ಗ್ಯಾಸ್ ಪಂಪ್ ನಲ್ಲಿ ಲೀಟರ್ ಗೆ 65.78 ರೂಪಾಯಿ ಯಂತೆ ಪರಿಷ್ಕೃತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿ ರಿಕ್ಷಾ ಚಾಲಕರಿಂದ ಸುಲಿಗೆ ನಡೆಸುತ್ತಿರುವ ವಿತರಕರ ಹಗಲು ದರೋಡೆಯನ್ನು ಸಮಗ್ರ ತನಿಖೆ ನಡೆಸಬೇಕು ಮತ್ತು ಇಂಧನ ಇತ್ಯಾದಿಗಳ ದರ ಪರಿಷ್ಕರಣೆಯಾದರೆ ಅಧಿಕೃತರು ಸಾರ್ವಜನಿಕ ಪ್ರಕಟಣೆ ನೀಡಬೇಕು ಎಂದು ನಿಯೋಗ ಜಿಲ್ಲಾಧಿಕಾರಿಯನ್ನು ಆಗ್ರಹಿಸಿತು.

ಈ ಸಂದರ್ಭದಲ್ಲಿ ರಾಜ್ಯ ಕೋಶಾಧಿಕಾರಿ ಖಾದರ್ ಫರಂಗಿಪೇಟೆ, ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ಪರ್ಲಿಯಾ, ಆಟೋ ಯೂನಿಯನ್ ಮಂಗಳೂರು ಘಟಕ ಅಧ್ಯಕ್ಷ ಇಲ್ಯಾಸ್ ಬೆಂಗರೆ, ಕೋಶಾಧಿಕಾರಿ ಶರೀಫ್ ಕುತ್ತಾರ್, ಮನ್ಸೂರ್ ಉಳ್ಳಾಲ ಮತ್ತಿತರರು ನಿಯೋಗದಲ್ಲಿದ್ದರು.

Join Whatsapp