ಮಂಗಳೂರು, ಅ.2: ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ದ.ಕ ಜಿಲ್ಲಾ ಸಮಿತಿ ವತಿಯಿಂದ ನಗರದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗಾಂಧಿ ಚಿಂತನೆಯ ಪ್ಲೇ ಕಾರ್ಡ್ ಪ್ರದರ್ಶಿಸಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ SDTU ದ.ಕ ಜಿಲ್ಲಾಧ್ಯಕ್ಷ ಝಾಕೀರ್ ಉಳ್ಳಾಲ್ ‘ಸಾತ್ವಿಕ ಪ್ರತಿಭಟನೆಯಿಂದ ಮಾನವನ ದೌರ್ಜನ್ಯ ಪ್ರವೃತ್ತಿ ಕ್ರಮೇಣ ಅಳಿಸಿಹೋಗಿ ಮಾನವ ಮಾನವನಾಗುತ್ತಾನೆ ಎಂದು ನಂಬಿದ ಮಹಾತ್ಮಾ ಗಾಂಧೀಜಿಯು, ಬ್ರಿಟಿಷರ ಅನ್ಯಾಯದ ವಿರುದ್ಧ ಹೋರಾಡಲು ಅಭಿವೃದ್ಧಿ ಪಡಿಸಿದ ವಿಶಿಷ್ಟ ತಂತ್ರವೇ ಸತ್ಯಾಗ್ರಹವಾಗಿತ್ತು. ಸಮಾಜದಲ್ಲಿ ಮೂಲಭೂತ ಬದಲಾವಣೆಗಾಗಿ ಗಾಂಧೀಜಿ ಕಂಡುಕೊಂಡ ಅಹಿಂಸಾ ಸತ್ಯಾಗ್ರಹ ಹೋರಾಟಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಲಭಿಸಿದ್ದು ಭಾರತಕ್ಕೆ ಹೆಮ್ಮೆಯಾಗಿದೆ’ ಎಂದಿದ್ದಾರೆ.
ಈ ಸಂದರ್ಭದಲ್ಲಿ SDTU ರಾಜ್ಯ ಕಾರ್ಯದರ್ಶಿ ಶರೀಫ್ ಪಾಂಡೇಶ್ವರ್, ಕೋಶಾಧಿಕಾರಿ ಖಾದರ್ ಫರಂಗಿಪೇಟೆ, ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ಪರ್ಲಿಯಾ, ಮಂಗಳೂರು ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮುನ್ನೂರು, ಪಡುಬಿದ್ರೆ ಗ್ರಾಮ ಪಂಚಾಯತ್ ಸದಸ್ಯ ಫಿರೋಝ್ ಪಡುಬಿದ್ರೆ, ಇರ್ಫಾನ್ ಉಳಾಯಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.