ಹಿಜಾಬ್ ತೀರ್ಪು ಹಿನ್ನೆಲೆ; ಜಿಲ್ಲಾಧಿಕಾರಿಯಿಂದ 144 ಸೆಕ್ಷನ್’ಗೆ ಆದೇಶ ನಾಳೆಯ ಪಾದಯಾತ್ರೆ ಮುಂದೂಡಿಕೆ : SDPI

Prasthutha|

ಮಂಗಳೂರು: ಬೆಳ್ತಂಗಡಿಯ ದಲಿತ ಸಮುದಾಯದ ವ್ಯಕ್ತಿ ದಿನೇಶ್ ಕನ್ಯಾಡಿ ಹತ್ಯೆ ಖಂಡಿಸಿ ನಾಳೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಆರಂಭವಾಗಬೇಕಿದ್ದ ಮೂರು ದಿನಗಳ ಪಾದಯಾತ್ರೆಯನ್ನು ಮುಂದೂಡಲಾಗಿದೆ.

- Advertisement -

ಬೆಳ್ತಂಗಡಿಯಿಂದ ಹೊರಟು ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿ ಕಚೇರಿವರೆಗೆ ಮಾರ್ಚ್ 15 ರಿಂದ 17ರ ವರೆಗೆ ಪಾದಯಾತ್ರೆ ಮೂಲಕ ಹಕ್ಕೊತ್ತಾಯಗಳನ್ನು ಮಂಡಿಸಲು SDPI ನಿರ್ಧರಿಸಿತ್ತು.

ಮಂಗಳವಾರ ಹೈಕೋರ್ಟ್ ನಲ್ಲಿ ಹಿಜಾಬ್ ಕುರಿತ ತೀರ್ಪು ಪ್ರಕಟವಾಗುತ್ತಿರುವ ಹಿನ್ನೆಲೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿರುವುದರಿಂದ ತಾತ್ಕಾಲಿಕವಾಗಿ ಪಾದಯಾತ್ರೆ ಕಾರ್ಯಕ್ರಮವನ್ನು ಮುಂದೂಡಿರುವುದಾಗಿ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ತಿಳಿಸಿದ್ದಾರೆ.

- Advertisement -

‘ದಿನೇಶ್ ಕನ್ಯಾಡಿಗೆ ನ್ಯಾಯ ಕೊಡಿ’ ಎಂಬ ಘೋಷವಾಕ್ಯದೊಂದಿಗೆ ಕೊಲೆ ಆರೋಪಿ ಸಂಘಪರಿವಾರದ ನಾಯಕನ ವಿರುದ್ಧ ಕಠಿಣ ಕ್ರಮ ವಹಿಸುವಂತೆ ಹಾಗೂ ಮೃತ ದಿನೇಶ್ ಕನ್ಯಾಡಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ SDPI ಒತ್ತಾಯಿಸಿತ್ತು.‌



Join Whatsapp