ತತ್ವ ಸಿದ್ಧಾಂತಕ್ಕೆ ಬದ್ಧರಾಗಿರುವ ಧೀರ ಪತ್ರಕರ್ತರಿಗೆ ವಿಶ್ವ ಪತ್ರಿಕಾ ಸ್ವಾತಂತ್ರ್ಯಾ ದಿನದ ಶುಭಾಶಯ ತಿಳಿಸಿದ SDPI

Prasthutha|

ಬೆಂಗಳೂರು: ಇಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವಾಗಿದ್ದು, ಪತ್ರಿಕೋದ್ಯಮದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಸತ್ಯವನ್ನು ಬಿತ್ತರಿಸುವ ಧೀರ ಪತ್ರಕರ್ತರಿಗೆ SDPI ಶುಭಾಶಯ ತಿಳಿಸಿದೆ.

- Advertisement -

ಈ ಕುರಿತು‌ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ SDPI ಕರ್ನಾಟಕ ಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯುತ್ತಾರೆ. ಆದರೆ ದುರದುಷ್ಟವಶಾತ್ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತದಲ್ಲಿ ಪತ್ರಿಕೋದ್ಯಮ ಮಾರಿಕೊಂಡ, ಗುಲಾಮಗಿರಿಗೆ ಜಾರಿಕೊಂಡ ಮಾಧ್ಯಮವಾಗಿದೆ. ಇಲ್ಲಿ ಪತ್ರಿಕೋದ್ಯಮದ ಸ್ವಾತಂತ್ರ್ಯವನ್ನು ಕಸಿಯಲಾಗಿದೆ ಎನ್ನುವುದಕ್ಕಿಂತ, ಪತ್ರಕರ್ತರೇ ಶರಣಾಗಿದ್ದಾರೆ ಎನ್ನುವುದೇ ಸೂಕ್ತ. ಇದಕ್ಕೆ ಸರ್ಕಾರದ ದಬ್ಬಾಳಿಕೆ ಸೇರಿದೆ. ಭಾರತ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ 161ನೇ ಸ್ಥಾನದಲ್ಲಿ ನರಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಇದರ ನಡುವೆಯೂ ಪತ್ರಿಕೋದ್ಯಮದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಸತ್ಯವನ್ನು ಬಿತ್ತರಿಸುವ ಮತ್ತು ಜನರನ್ನು ಜಾಗೃತಗೊಳಿಸಲು ಶ್ರಮಿಸುತ್ತಿರುವ ಧೀರ ಪತ್ರಕರ್ತರ ಪಡೆಯೂ ಒಂದೆಡೆ ಇದೆ. ಅವರ ಅಪ್ರತಿಮ ದೇಶಸೇವೆಗೆ ಧನ್ಯವಾದಗಳನ್ನು ಸಲ್ಲಿಸುತ್ತಾ ಅವರಿಗೆ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಕೋರುತ್ತೇನೆ ಎಂದಿದ್ದಾರೆ.



Join Whatsapp