ಮಂಗಳೂರು: ನಾಳೆ ಗುರುಪುರ ಕೈಕಂಬ ಜಂಕ್ಷನ್ ನಲ್ಲಿ SDPI ವತಿಯಿಂದ ಹಕ್ಕೊತ್ತಾಯ ಸಭೆ ನಡೆಯಲಿದೆ.
ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ SDPI ಗುರುಪುರ ಬ್ಲಾಕ್ ಸಮಿತಿಯ ಅಧ್ಯಕ್ಷ ಅಶ್ರಫ್ ಕೈಕಂಬ, ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ರ ಬಿಕರ್ನಕಟ್ಟೆ-ಸಾಣೂರು ವರೆಗೆ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಗುರುಪುರ ಕೈಕಂಬ ಜಂಕ್ಷನ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಒಂದು ನಗರವಾಗಿದೆ ಸುಮಾರು 150 ಕ್ಕಿಂತಲೂ ಹೆಚ್ಚು ಅಂಗಡಿ ಮುಂಗಟ್ಟುಗಳು, ಬ್ಯಾಂಕಿಂಗ್ ಗಳು ಖಾಸಗಿ ಹಾಗೂ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಸುಮಾರು ಐದಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿಕೊಂಡು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದೆ. ಕೈಕಂಬ ಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳು ಹೊಂದಿರುವ ವರ್ತಕರು ಮಾಧ್ಯಮ ಮತ್ತು ಬಡ ವರ್ಗದವರಾಗಿದ್ದಾರೆ ಇದರಿಂದಲೇ ತಮ್ಮ ದೈನಂದಿನ ಜೀವನವನ್ನು ನಡೆಸುತ್ತಿದ್ದಾರೆ.
ಸದ್ರಿ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಂಡರ್ ಪಾಸ್ ಮಾದರಿಯ ಮೇಲು ಸೇತುವೆಯನ್ನು ನಿರ್ಮಿಸಲು ಮುಂದಾಗಿದ್ದು ಇದು ಕೈಕಂಬ ಪೇಟೆಯ ಭವಿಷ್ಯವನ್ನೇ ಅಸ್ಥಿರಗೊಳಿಸಲಿದೆ ಮತ್ತು ಅಭಿವೃದ್ಧಿಪಥದಲ್ಲಿರುವ ಒಂದು ಪೇಟೆಯನ್ನು ಮುಚ್ಚುವ ಹಂತಕ್ಕೆ ಸರಕಾರ ಮುಂದಾಗಿದೆ. ಒಂದು ವೇಳೆ ಅಂಡರ್ ಪಾಸ್ ಮಾದರಿಯ ಮೇಲು ಸೇತುವೆ ನಿರ್ಮಾಣವಾದಲ್ಲಿ ಕೈಕಂಬ ಪೇಟೆಯಲ್ಲಿ ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ, ಬಸು ತಂಗುದಾಣ, ಲಘು ಹಾಗೂ ಘನ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಪರದಾಡುವ ಪರಿಸ್ಥಿತಿ ಎದುರಾಗಬಹುದು ಬೆಳೆಯುತ್ತಿರುವ ನಗರ, ಟ್ರಾಫಿಕ್ ವ್ಯವಸ್ಥೆ ಮತ್ತು ವರ್ತಕರ ಹಿತದೃಷ್ಟಿಯನ್ನು ಇಟ್ಟುಕೊಂಡು ಸದ್ರಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿಯನ್ನು ನಿಲ್ಲಿಸಿ ಚತುಸ್ಪದ ಫ್ಲೈ ಓವರ್ ಸೇತುವೆಯನ್ನು ನಿರ್ಮಿಸಬೇಕೆಂದು ಆಗ್ರಹಿಸಿ SDPI ಬೆಂಬಲಿತ ಪಂಚಾಯತ್ ಸದಸ್ಯರ ನೇತೃತ್ವದಲ್ಲಿ ಹಕ್ಕೊತ್ತಾಯ ಸಭೆಯನ್ನು ಹಮ್ಮಿಕೊಂಡಿದ್ದು ಈ ಸಭೆಗೆ ಗುರುಪುರ ಕೈಕಂಬ ಪರಿಸರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ SDPI ಗುರುಪುರ ಬ್ಲಾಕ್ ಸಮಿತಿಯ ಅಧ್ಯಕ್ಷ ಅಶ್ರಫ್ ಕೈಕಂಬ ಪ್ರಕಟಣೆ ವಿನಂತಿಸಿದ್ದಾರೆ.