ಎಸ್.ಡಿ.ಪಿ.ಐ ಸೂರಿಂಜೆ ಗ್ರಾಮ ಸಮಿತಿ ಮಹಿಳಾ ಸ್ನೇಹ ಸಮ್ಮಿಲನ, ಪಕ್ಷ ಸೇರ್ಪಡೆ

Prasthutha|

ಸೂರಿಂಜೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸೂರಿಂಜೆ ಗ್ರಾಮ ಸಮಿತಿಗೊಳಪಟ್ಟ ಮಹಿಳಾ ಸ್ನೇಹ ಸಮ್ಮಿಳನವು ಸೂರಿಂಜೆಯಲ್ಲಿ ಜರುಗಿತು.
ಮೂಡಬಿದರೆ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಅಲ್ಫೋನ್ಸ್ ಫ್ರಾಂಕೋ ಭಾಗವಹಿಸಿ ರಾಜಕೀಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹಾಗೂ ರಾಜಕೀಯ ಇಚ್ಛಾಶಕ್ತಿಯ ಬಗ್ಗೆ ಮಾತನಾಡಿದರು.
ಮೂಡಬಿದರೆ ಕ್ಷೇತ್ರ ಮಹಿಳಾ ಚುನಾವಣಾ ಉಸ್ತುವಾರಿ ಆಯೆಷಾ ಬಜ್ಪೆ ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ ಈ ದೇಶಕ್ಕೆ ಎಸ್.ಡಿ.ಪಿ.ಐನ ಅಗತ್ಯದ ಬಗ್ಗೆ ವಿವರಿಸಿದರು. ಇದೇ ಸಂಧರ್ಭದಲ್ಲಿ ಹಲವಾರು ಮಹಿಳೆಯರು ಆಯೆಷಾ ಬಜ್ಪೆರವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಮೂಡಬಿದರೆ ಕ್ಷೇತ್ರ ಅಧ್ಯಕ್ಷ ಆಸಿಫ್ ಕೋಟೆಬಾಗಿಲು, ಕೋಶಾಧಿಕಾರಿ ಅಯ್ಯೂಬ್ ಸೂರಿಂಜೆ, ಸೂರಿಂಜೆ ಗ್ರಾಮ ಸಮಿತಿಯ ಅಧ್ಯಕ್ಷ ಹಾಗೂ ಪಂಚಾಯತ್ ಸದಸ್ಯ ಮಾಲಿಕ್ ಸೂರಿಂಜೆ, ಪಂಚಾಯತ್ ಸದಸ್ಯರಾದ ಸಲಾಂ, ಪುಷ್ಪ, ಬಿಫಾತಿಮ ಹಾಗೂ ಪಕ್ಷದ ಹಿರಿಯ ಮುಖಂಡರಾದ ಹಮೀದ್, ಯಾಕೂಬ್ ಹಾಗೂ ಹಲವಾರು ಮಹಿಳಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

- Advertisement -