ಸ್ನಾನ ಮಾಡುವಾಗ ಮೊಬೈಲ್ ನಲ್ಲಿ ವಿಡಿಯೋ ಸೆರೆ | ಈಗ ಸೌಟು, ಪೊರಕೆ ಹಿಡಿವ ಕೈಗಳಿಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟು ರೋಷವನ್ನು ತೋರಿಸಿ: ರಿಯಾಝ್ ಕಡಂಬು

Prasthutha|

ಮಂಗಳೂರು: ಮಹಿಳೆಯರು ಸ್ನಾನ ಮಾಡುವಾಗ ವಿಡಿಯೋ ಸೆರೆ ಹಿಡಿಯುತ್ತಿದ್ದವನು ಸಿಕ್ಕಿ ಬಿದ್ದಿದ್ದಾನೆ. ಸೌಟು ಮತ್ತು ಪೊರಕೆ ಹಿಡಿವ ಕೈಗಳಿಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟು ಕಳುಹಿಸಿ. ನಿಮ್ಮ ರೋಷವನ್ನು ಈಗ ತೋರಿಸಿ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ಸಂಘಪರಿವಾರಕ್ಕೆ ಸವಾಲೆಸೆದಿದ್ದಾರೆ.

- Advertisement -

ನೆರೆಮನೆಯ ಮಹಿಳೆಯೊಬ್ಬರು ಸ್ನಾನ ಮಾಡುತ್ತಿದ್ದಾಗ ಸಂಘಪರಿವಾರದ ಕಾರ್ಯಕರ್ತನೊಬ್ಬ ಮೊಬೈಲಿನಲ್ಲಿ ವಿಡಿಯೋ ಚಿತ್ರೀಕರಿಸಿ ಸಿಕ್ಕಿ ಬಿದ್ದಿರುವ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಅವರು, “ಸಂಘಪಾರಿವಾರದ ವಿಷ ಕಾರುವ ದ್ವೇಷ ಭಾಷಣಗಾರರೇ, ನಿಮ್ಮ ಕಾರ್ಯಕರ್ತ, ಮಹಿಳೆಯರು ಸ್ನಾನ ಮಾಡುವಾಗ ಹಲವು ದಿನಗಳಿಂದ ಮೊಬೈಲ್ ನಲ್ಲಿ ವಿಡಿಯೋ ಸೆರೆ ಹಿಡಿಯುತ್ತಿದ್ದವನು ಸಿಕ್ಕಿ ಬಿದ್ದಿದ್ದಾನೆ. ಸೌಟು ಮತ್ತು ಪೊರಕೆ ಹಿಡಿವ ಕೈಗಳಿಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟು ಕಳುಹಿಸಿ. ನಿಮ್ಮ ರೋಷವನ್ನು ಈಗ ತೋರಿಸಿ.” ಎಂದು ಎಂದು ಹೇಳಿದ್ದಾರೆ.

ಉಡುಪಿಯಲ್ಲಿ ಖಾಸಗಿ ಕಾಲೇಜಿನ ವಿಡಿಯೋ ಪ್ರಕರಣ ಖಂಡಿಸಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ್ದ ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್, ಹಿಂದೂ ತಾಯಂದಿರು ಎಚ್ಚರ ಆಗಬೇಕು, ಸೌಟು ಪೊರಕೆ ಹಿಡಿಯುವ ಕೈಯ್ಯಲ್ಲಿ ಶಸ್ತ್ರಾಸ್ತ್ರ ಹಿಡಿಯಿರಿ, ಅನ್ಯಾಯವಾದಾಗ ತಲವಾರು, ಕತ್ತಿ ಹಿಡಿಯಲು ರೆಡಿಯಾಗಿ, ನಮ್ಮ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು.

Join Whatsapp