ದೇಶದ ಸರ್ವಾಧಿಕಾರವನ್ನು ಕೊನೆಗಾಣಿಸಲು SDPI ದಿಟ್ಟ ಹೆಜ್ಜೆಯಿಟ್ಟಿದೆ: ರಿಯಾಝ್ ಫರಂಗಿಪೇಟೆ

Prasthutha|

ಮಂಗಳೂರು: ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಕಳೆದ 10 ವರ್ಷಗಳಿಂದ ಚಾಲ್ತಿಯಲ್ಲಿದ್ದ ಸರ್ವಾಧಿಕಾರಿವನ್ನು ಕೊನೆಗಾಣಿಸಲು ಎಸ್ಡಿಪಿಐ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದು ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ತಿಳಿಸಿದ್ದಾರೆ.

- Advertisement -

ಪಕ್ಷದ 16ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ದೇರಳಕಟ್ಟೆಯ ಬಿಸಿಸಿ ಹಾಲ್ ಮುಂಭಾಗದಲ್ಲಿ ನಡೆದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರಾಧ್ಯಕ್ಷ ಬಶೀರ್ ಎಸ್.ಎಮ್ ವಹಿಸಿದ್ದರು.

ಎಸ್ಡಿಪಿಐ ಕ್ಷೇತ್ರ ಸಮಿತಿ ವತಿಯಿಂದ ನಡೆದ ಈ ಕಾರ್ಯಕ್ರಮದ ವೇದಿಕೆಯಲ್ಲಿ ರಾಜ್ಯ ಸಮಿತಿ ಸದಸ್ಯ ನವಾಜ್ ಉಳ್ಳಾಲ್, ಕ್ಷೇತ್ರ ಸಮಿತಿ ಕಾರ್ಯದರ್ಶಿಗಳಾದ ಉಬೈದ್ ಅಮ್ಮೆಂಬಳ,ಅಶ್ರಫ್ ಮಂಚಿ, ಕ್ಷೇತ್ರ ಸಮಿತಿ ಕೋಶಾಧಿಕಾರಿ ರವೂಫ್ ಉಳ್ಳಾಲ್, ಕ್ಷೇತ್ರ ಸಮಿತಿಯ ಸದಸ್ಯರಾದ ರಹ್ಮಾನ್ ಬೋಳಿಯಾರ್, ಅಬ್ದುಲ್ ಲತೀಫ್ ಕಲ್ಲಾಪು,ಅರೀಫ್ ಬೋಳಿಯಾರ್, ಅಬ್ದುಲ್ ರಹ್ಮಾನ್ ಮುನ್ನೂರು,ಮುನ್ನೂರು ಬ್ಲಾಕ್ ಸಮಿತಿ ಅಧ್ಯಕ್ಷ ಕಮರ್ ಮಲಾರ್,ಬೆಲ್ಮ ಗ್ರಾಮಸಮಿತಿ ಅಧ್ಯಕ್ಷ ಅಶ್ರಫ್ ಡಿ.ಎ ಸೇರಿದಂತೆ ಹಲವು ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

ಉಬೈದ್ ಅಮ್ಮೆಂಬಳ ಸ್ವಾಗತಿಸಿ, ರಹ್ಮಾನ್ ಬೋಳಿಯಾರ್ ವಂದಿಸಿದರು. ಕ್ಷೇತ್ರ ಕಾರ್ಯದರ್ಶಿ ಅಶ್ರಫ್ ಮಂಚಿ ಕಾರ್ಯಕ್ರಮ ನಿರೂಪಣೆಗೈದರು.



Join Whatsapp