ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡ ಬೇಕೆಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಎಸ್ ಡಿಪಿಐ ಮನವಿ

Prasthutha|

ಮಂಗಳೂರು: ಕಳೆದ ಹದಿನೆಂಟು ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿ ಬರುವ 52ನೇ ಕಣ್ಣೂರು ವಾರ್ಡ್ ಮೂಲಭೂತ ಸೌಲಭ್ಯಗಳಿಂದ ವಂಚಿತವಾದ ಗ್ರಾಮ ಅಂದರೆ ತಪ್ಪಾಗಲಾರದು.ಈ ಗ್ರಾಮಕ್ಕೆ ಪಾಲಿಕೆಯ ಸ್ವಚ್ಛ ಭಾರತ್ ಅಭಿಯಾನದ ಭಾಗವಾದ ಕಸಗುಡಿಸುವ ಪೌರಕಾರ್ಮಿಕರು ಬರುವುದಾಗಲಿ,ಕಸ ವಿಲೇವಾರಿ ಮಾಡುವ ವ್ಯವಸ್ಥೆಯಾಗಲಿ, ರಸ್ತೆ ದುರಸ್ತಿ ಪಡಿಸುವುದಾಗಲಿ, ದಾರಿ ದೀಪಗಳ ವ್ಯವಸ್ಥೆ ಮಾಡುವುದಾಗಲಿ,ಡೆಂಗ್ಯೂ, ಮಲೇರಿಯಾದಂತಹ ಮಾರಕ ರೋಗ ಹರಡದಂತೆ ಕೀಟ ನಾಶಕ ಔಷಧಿ ಸಿಪಡನೆ,ಚರಂಡಿ ಮತ್ತು ಡ್ರೈನೇಜ್ ವ್ಯವಸ್ಥೆಯಾಗಲಿ ಸರಿಪಡಿಸುವ ಯಾವುದೇ ಕಾರ್ಯ ತಂತ್ರಗಳು ಕಡು ಬಡವರು,ಮಧ್ಯಮ ವರ್ಗದ ಜನರು ನೆಲೆಸಿರುವ ಈ ಗ್ರಾಮದಲ್ಲಿ ಕಾಣಲು ಸಿಗುವುದಿಲ್ಲ.ಸಾರ್ವಜನಿಕರು ಪ್ರತಿವರ್ಷ ತೆರಿಗೆ,ನೀರಿನ ಬಿಲ್ಲ್ ಪಾವತಿಸುತ್ತಿದ್ದಾರೆ. ಆದರೆ ಇಲ್ಲಿನ ಸಮಸ್ಯೆಗಳಿಗೆ ಯಾವುದೇ ರೀತಿಯ ಪರಿಹಾರ ಪರಿಹರಿಸಿ ಕೊಡಲು ಕಾರ್ಪೊರೇಟರ್,ಶಾಸಕ,ಸಂಸದರಾಗಲಿ ಪ್ರಯತ್ನಿಸುತ್ತಿಲ್ಲ .

- Advertisement -

ಗ್ರಾಮದಲ್ಲಿ ನೆಲೆಸಿರುವ ಮೂಲಭೂತ ಸಮಸ್ಯೆಗಳನ್ನು ಮನಗಂಡು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಣ್ಣೂರ್ ಎಸ್’ಡಿಪಿಐ ನಿಯೋಗ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು. ನಿಯೋಗದಲ್ಲಿ ಎಸ್‌’ಡಿಪಿಐ ಕಣ್ಣೂರು ವಾರ್ಡ್ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಕಣ್ಣೂರು,ಕಾರ್ಯದರ್ಶಿ ಫೈಝಲ್,ಬೂತ್ ಅಧ್ಯಕ್ಷರಾದ ಮಿಯಂದಾದ್,ನವಾಜ್ ಕಣ್ಣೂರ್,ಎಸ್‌ಡಿಪಿಐ ಬೂತ್ ಸಮಿತಿ ಸದಸ್ಯರಾದ ಸರ್ಫರಾಝ್ ಕಣ್ಣೂರ್ ಮತ್ತು ಮುಸ್ತಾಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Join Whatsapp